
ಡಾ. ಮನೋರಮಾ ಬಿ.ಎನ್ ಅವರ ಮಹತ್ವದ ಯಕ್ಷಗಾನ ಕೃತಿಯಾದ ‘ಯಕ್ಷಮಾರ್ಗಮುಕುರ’ ದ ಅವಲೋಕನ ಮತ್ತು ಆ ಬಳಿಕ ಯಕ್ಷಗಾನ ಪ್ರಾತ್ಯಕ್ಷಿಕೆ ಕಮ್ಮಟ ಕಾರ್ಯಕ್ರಮ ಡಿಸೆಂಬರ್ 23 ಶುಕ್ರವಾರದಂದು ನಡೆಯಲಿದೆ.
ಆ ದಿನ ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳ ಗಂಗೋತ್ರಿಯ ಯಕ್ಷಗಾನ ಕಲಾ ಕೇಂದ್ರದಲ್ಲಿ ಪೂರ್ವಾಹ್ನ ಘಂಟೆ 9.30ರಿಂದ ‘ಯಕ್ಷಮಾರ್ಗಮುಕುರ’ ದ ಅವಲೋಕನ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಲಿದ್ದಾರೆ.
ಮಧ್ಯಾಹ್ನದ ನಂತರ ಅಂದರೆ ಅಪರಾಹ್ನ 1.30 ಕ್ಕೆ ಸರಿಯಾಗಿ ಯಕ್ಷಗಾನ ಪ್ರಾತ್ಯಕ್ಷಿಕೆ ಕಮ್ಮಟ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನುರಿತ ಕಲಾವಿದರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಎಲ್ಲಾ ವಿವರಗಳಿಗೆ ಕರಪತ್ರವನ್ನು ನೋಡಿ.