
18-12-2022 ರಂದು ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ಬಣ್ಣದ ಸಕ್ಕಟ್ಟು ಮತ್ತು ರಾಜಋಷಿ ರವೀಂದ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆ. ಮೋಹನ್ ನಿರ್ದೇಶನದ ಯಕ್ಷದೇಗುಲ ಬೆಂಗಳೂರು ತಂಡದವರಿoದ ಆದಷ್ಟು ಪರಂಪರೆಯ ಹತ್ತಿರ ಕೊಂಡೊಯ್ಯುವ “ಸೈಂಧವ ವಧೆ” ಯಕ್ಷಗಾನ ಪ್ರದರ್ಶನ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಚಂದ್ರಕಾoತ್ ರಾವ್ ಮೂಡ್‌ಬೆಳ್ಳೆ, ಸುಧೀರ್ ಭಟ್, ಮದ್ದಲೆಯಲ್ಲಿ ರಾಘವೇಂದ್ರ ಹೆಗಡೆ, ಚಂಡೆಯಲ್ಲಿ ಮಂಜುನಾಥ ನಾವುಡ, ಹಾಗೇ ಮುಮ್ಮೇಳದಲ್ಲಿ ಪರಂಪರೆಯ ಅರ್ಜುನನಾಗಿ ವಿದ್ವಾಂಸರಾದ ಸುಜಯೀಂದ್ರ ಹಂದೆ, ಕೃಷ್ಣನಾಗಿ ಆದಿತ್ಯ ಹೆಗಡೆ, ಸುಭದ್ರೆಯಾಗಿ ಸ್ಪೂರ್ತಿ ಭಟ್, ದ್ರೋಣನಾಗಿ ತಮ್ಮಣ್ಣ ಗಾಂವ್ಕರ್,
ಕೌರವನಾಗಿ ಉಪನ್ಯಾಸಕ ಶಶಾಂಕ ಪಾಟೀಲ್, ಧರ್ಮರಾಯನಾಗಿ ಉಪನ್ಯಾಸಕ ರಾಘವೇಂದ್ರ ತುಂಗ, ಸೈಂಧವನಾಗಿ ರಮೇಶ ಶೃಂಗೇರಿ, ದುಶ್ಯಾಸನನಾಗಿ ಸುಹಾಸ ಕರಬ, ಆರತಿ ಎತ್ತುವ ಸ್ತ್ರೀವೇಷದಲ್ಲಿ ವೈಭವಿ ಉಡುಪ ಹಾಗೇ ರಂಗದ ಹಿಂದೆ ಸುದೀಪ ಉರಾಳ, ಸ್ಕಂದ ಉರಾಳ, ಬ್ಯಾಂಕ್ ರಾಘವೇಂದ್ರ ತುಂಗ, ವೆಂಕಟೇಶ್ ವೈದ್ಯ ಮತ್ತು ರಾಜು ಪೂಜಾರಿ ಸಹಕರಿಸಿದರು.
ಸಂಯೋಜನೆಯನ್ನು ಯಕ್ಷದೇಗುಲದ ಕೋಟ ಸುದರ್ಶನ ಉರಾಳ ಮಾಡಿದರು.
ವರದಿ : ಕೋಟ ಸುದರ್ಶನ ಉರಾಳ