
ಪುತ್ತೂರು, ಡಿ 15 : ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ‘ಕೈಗಾರಿಕಾ ಭೇಟಿ’ ಕಾರ್ಯಕ್ರಮ ನಡೆಯಿತು. ಪದವಿ ಪೂರ್ವ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಮಂಗಳೂರಿನ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಘಟಕ ಮಂಗಳೂರು ಡೇರಿಗೆ ಭೇಟಿ ನೀಡಿದರು.
ಅದೇ ರೀತಿ ಮಂಗಳೂರಿನ ಬೈಕಂಪಾಡಿಯ ಗೇರುಬೀಜ ಸಂಸ್ಕರಣೆ ಹಾಗೂ ರಫ್ತು ಘಟಕವಾದ ಅಚಲ್ ಇಂಡಸ್ಟ್ರೀಸ್, ವಾಹನಗಳ ಸಸ್ಪೆಷನ್ಸ್ ತಯಾರಿಕಾ ಘಟಕ ಲಾಮಿನಾ ಸಸ್ಪೆಷನ್ಸ್ ಮತ್ತು ಒಡ್ಡೂರು ಫಾರ್ಮ್ಸ್ಗೆ ಭೇಟಿ ನೀಡಿ ಮಾಹಿತಿ ಪಡೆದರು.
ಘಟಕದಲ್ಲಿ ಉತ್ಪಾದಿಸಿದ ವಿವಿಧ ಬಗೆಯ ಉತ್ಪನ್ನಗಳನ್ನು ದೇಶದ ವಿವಿಧೆಡೆ ವಿತರಣೆ ಹಾಗೂ ಹೊರ ರಾಷ್ಟ್ರಗಳಿಗೆ ರಫ್ತು ಮಾಡಲಾಗುವ ವಿಧಾನಗಳ ಬಗ್ಗೆ ಮಾಹಿತಿಯನ್ನು ಪಡೆದರು.
ಸುಮಾರು 70 ವಿದ್ಯಾರ್ಥಿಗಳೊಂದಿಗೆ ವಾಣಿಜ್ಯ ಸಂಘದ ಸಂಯೋಜಕಿ ಉಷಾ ಎ. ಎಂ., ವಾಣಿಜ್ಯ ವಿಭಾಗದ ಮುಖ್ಯಸ್ಥ ಶ್ರೀಧರ ಶೆಟ್ಟಿಗಾರ್ ಹಾಗೂ ವಿಭಾಗದ ಉಪನ್ಯಾಸಕರು ಭೇಟಿ ನೀಡಿದರು.