
ನಟಿ ದೀಪಿಕಾ ಪಡುಕೋಣೆ, ಕೇಸರಿ ಬಣ್ಣದ ಬಿಕಿನಿಯಲ್ಲಿ ಪಠಾಣ್ ಹಿಂದಿ ಸಿನಿಮಾದ ಬೇಷರಂ ರಂಗ್ ಹಾಡಿಗೆ ಅಶ್ಲೀಲವಾಗಿ ನರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪಠಾಣ್ ಚಿತ್ರವನ್ನು ಬಾಯ್ಕಾಟ್ ಮಾಡಲು ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿವೆ. ಚಿತ್ರದ ಮೊದಲ ಹಾಡು ಸೋಮವಾರ ಬಿಡುಗಡೆಯಾಗಿದೆ. ‘ಬೇಷರಂ ರಂಗ್’ ಹಾಡಿನಲ್ಲಿ ದೀಪಿಕಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.
ಇದೀಗ ಈ ಹಾಡಿನ ವಿರುದ್ಧ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹರಿಹಾಯ್ದಿದ್ದಾರೆ. ಹಾಡಿನ ದೃಶ್ಯಗಳಿಗೆ ಕೆಲವು ತಿದ್ದುಪಡಿಗಳನ್ನು ಮಾಡದೆ ಮಧ್ಯಪ್ರದೇಶದಲ್ಲಿ ಚಿತ್ರಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
“ಪಠಾನ್’ ಚಿತ್ರವು ದೋಷಗಳಿಂದ ತುಂಬಿದೆ ಮತ್ತು ವಿಷಕಾರಿ ಮನಸ್ಥಿತಿಯನ್ನು ಆಧರಿಸಿದೆ. ಹಾಡಿನಲ್ಲಿ ಬಳಸಿರುವ ಬಿಕಿನಿ ತುಂಬಾ ಆಕ್ಷೇಪಾರ್ಹವಾಗಿದೆ. ‘ಬೇಷರಂ ರಂಗ್’ ಹಾಡಿನ ಸಾಹಿತ್ಯ, ಹಾಡಿನಲ್ಲಿ ಧರಿಸಿರುವ ಕೇಸರಿ ಮತ್ತು ಹಸಿರು ಬಟ್ಟೆಗಳನ್ನು ಬದಲಾಯಿಸಬೇಕಾಗಿದೆ.
ಈ ತಿದ್ದುಪಡಿಗಳನ್ನು ಮಾಡಲು ನಾನು ತಯಾರಕರನ್ನು ವಿನಂತಿಸಲು ಬಯಸುತ್ತೇನೆ. ಇಲ್ಲವಾದಲ್ಲಿ ಮಧ್ಯಪ್ರದೇಶದಲ್ಲಿ ಈ ಚಿತ್ರಕ್ಕೆ ಅವಕಾಶ ನೀಡಬೇಕೋ ಬೇಡವೋ ಎಂಬುದು ಪ್ರಶ್ನೆಯಾಗಲಿದೆ,’’ ಎಂದು ಅವರು ಹೇಳಿದ್ದಾರೆ.