
ಬಾಲಿವುಡ್ ಚಿತ್ರರಂಗದ ಪ್ರಖ್ಯಾತ ನಟಿ ಜಾಹ್ನವಿ ಕಪೂರ್ (ಜಾನ್ವಿ ಕಪೂರ್) ಇತ್ತೀಚೆಗೆ ಸುಪ್ರಸಿದ್ಧ ಪ್ರವಾಸಿ ತಾಣವಾದ ಮಾಲ್ಡೀವ್ಸ್ ದೇಶದ ಸಮುದ್ರದಂಡೆಯಲ್ಲಿ ವಿಹರಿಸಿದ್ದರು.

ಅಲ್ಲಿ ವಿಹರಿಸುತ್ತಿರುವ ತನ್ನ ಮಾದಕ ಭಂಗಿಯ ಫೋಟೋಗಳನ್ನು ಇನ್ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಜಾಹ್ನವಿ ಕಪೂರ್ (ಜಾನ್ವಿ ಕಪೂರ್) ಎಂದು ಗೊತ್ತಲ್ಲ? ಬಾಲಿವುಡ್ ಚಿತ್ರರಂಗದ ಪ್ರಖ್ಯಾತ ನಟಿಯಾಗಿದ್ದ ದಿವಂಗತ ಶ್ರೀದೇವಿಯ ಮಗಳು.
ಒಂದಕ್ಕಿಂತ ಒಂದು ಹೆಚ್ಚು ಆಕರ್ಷಕವಾದ ಫೋಟೋಗಳನ್ನು ಅವರು ಅಲ್ಲಿ ಪೋಸ್ಟ್ ಮಾಡಿದ್ದಾರೆ.
ಒಂದು ಫೋಟೋದಲ್ಲಿ ಸ್ನೇಹಿತರ ಜೊತೆ ಕುಳಿತುಕೊಂಡಿರುವುದು ಗೋಚರಿಸುತ್ತದೆ, ಫೋಟೋದ ಕೆಳಗೆ ಜಾಹ್ನವಿ ಕಪೂರ್ ಅವರು “ಸುಂದರವಾದ ಸೂರ್ಯಾಸ್ತದೊಂದಿಗೆ ಪಟ್ಟಣಕ್ಕೆ ಮರಳಿದ ಸ್ವಾಗತ ಮತ್ತು ಅತ್ಯುತ್ತಮ ಕಂಪನಿ. ನಾನು ಮೆಚ್ಚುವ ಹಲವಾರು ಜನರೊಂದಿಗೆ ಒಂದೇ ಕೋಣೆಯಲ್ಲಿದ್ದಕ್ಕಾಗಿ ಗೌರವವಾಗಿದೆ!!” ಎಂದು ಬರೆದುಕೊಂಡಿದ್ದಾರೆ.

ಜಾಹ್ನವಿ ಕಪೂರ್ ಅವರು ಇನ್ಸ್ಟಾ ಗ್ರಾಮ್ ನಲ್ಲಿ 21 ಮಿಲಿಯನ್ ಗಿಂತಲೂ ಹೆಚ್ಚಿನ ಫಾಲೋವರ್ಸ್ ಹೊಂದಿದ್ದಾರೆ. (ಫೋಟೋ ಕೃಪೆ: ಜಾಹ್ನವಿ ಕಪೂರ್ ಇನ್ಸ್ಟಾ ಗ್ರಾಮ್ )