
ಯಕ್ಷತೂಣೀರ ಸಂಪ್ರತಿಷ್ಠಾನ, ಕೋಟೂರು ಇವರಿಂದ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಯಕ್ಷಗಾನ ಬಯಲಾಟ ಸೇವೆ
ಕೋಟೂರು ಯಕ್ಷತೂಣೀರ ಸಂಪ್ರತಿಷ್ಠಾನದ ಆಶ್ರಯದಲ್ಲಿ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಸೇವಾರೂಪವಾಗಿ ಅಜಪುರದ ಸುಬ್ಬ ವಿರಚಿತ, ಹರಿಕೃಷ್ಣ ಹೊಳ್ಳ ಬ್ರಹ್ಮಾವರ ಇವರಿಂದ ಪರಿಷ್ಕರಿಸಲ್ಪಟ್ಟ ಪಾರಿಜಾತ ಪ್ರಸಂಗದ ಭಾಗವಾದ “ನರಕಾಸುರ ಮೋಕ್ಷ” ಕಾಲಮಿತಿಯ ಯಕ್ಷಗಾನ ಬಯಲಾಟವು ಜರಗಿತು.
ಪ್ರತಿಷ್ಠಾನದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಹಾಡುಗಾರಿಕೆಯಲ್ಲಿ ತಲ್ಪಣಾಜೆ ಸಹೋದರರಾದ ವೆಂಕಟ್ರಮಣ ಭಟ್ ಹಾಗೂ ಶಿವಶಂಕರ ಭಟ್, ಹಿಮ್ಮೇಳದಲ್ಲಿ ಅಡ್ಕ ಕೃಷ್ಣ ಭಟ್, ಅಂಬೆಮೂಲೆ ಶಿವಶಂಕರ ಭಟ್, ಬೇಂಗ್ರೋಡಿ ಲಕ್ಷ್ಮೀಶ, ಗಿರೀಶ್ ಕೋಳಿಯಡ್ಕ ಸಹಕರಿಸಿದರು.
ಪಾತ್ರವರ್ಗದಲ್ಲಿ ಅಡ್ಕ ಸುಬ್ರಹ್ಮಣ್ಯ ಭಟ್, ಡಾ. ಶಿವಕುಮಾರ್ ಅಡ್ಕ, ಧರ್ಮೇಂದ್ರ ಮಾಸ್ಟರ್ ಕೂಡ್ಲು, ಮಹೇಶ್ ಎಡನೀರು, ಪೃಥ್ವಿ ಪೆರುವೋಡಿ, ನಿರಂಜನ ಬಳ್ಳುಳ್ಳಾಯ ಮುಳಿಯಾರು, ಗುರುಪ್ರಸಾದ್ ಮುಳಿಯಾರು, ಶರತ್ ರಾವ್ ಕಾರಡ್ಕ,ಯತಿರಾಜ್ ಅಮಕ್ಕಾರು, ಮನೀಶ್ ಮುಳಿಯಾರು, ದೀಕ್ಷಾ ಅಂಬುಕುಂಜೆ, ಯಶಸ್ ಮಜಕ್ಕಾರು, ಅದ್ವೈತ್ ಅಗ್ನಿಹೋತ್ರಿ ಹಾಗೂ ಚೈತ್ರ ಅಮಕ್ಕಾರು ಭಾಗವಹಿಸಿದರು.
ವರ್ಣಾಲಂಕಾರ ಮತ್ತು ವಸ್ತ್ರಾಲಂಕಾರದಲ್ಲಿ ರಾಕೇಶ್ ಗೋಳಿಯಡ್ಕ ಹಾಗೂ ಬಳಗದವರು ಸಹಕರಿಸಿದರು.
ವೇದಿಕೆ, ಧ್ವನಿ ಹಾಗೂ ಬೆಳಕಿನ ವ್ಯವಸ್ಥೆಯನ್ನು ಶ್ರೀ ಕ್ಷೇತ್ರದ ಆಶ್ರಯದಲ್ಲಿರುವ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಮಂಡಳಿಯವರು ಒದಗಿಸಿದ್ದಾರೆ. ಕಾರ್ಯಕ್ರಮದಲ್ಲಿ ಗೋವಿಂದ ಬಳ್ಳಮೂಲೆ ಸ್ವಾಗತಿಸಿ ಮುರಳಿಕೃಷ್ಣ ಸ್ಕಂದ ಧನ್ಯವಾದವಿತ್ತರು.