
ವಿದ್ಯುತ್ ಕಡಿತ (ಪವರ್ ಕಟ್) ಸಂಭವಿಸಿ ವೈದ್ಯಕೀಯ ಕಾಲೇಜಿನಲ್ಲಿ 4 ಶಿಶುಗಳು ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ನಿನ್ನೆ ರಾತ್ರಿ ಛತ್ತೀಸ್ಗಢ ಅಂಬಿಕಾಪುರ ವೈದ್ಯಕೀಯ ಕಾಲೇಜಿನ SNCU ವಾರ್ಡ್‌ನಲ್ಲಿ 4 ಗಂಟೆಗಳ ಕಾಲ ವಿದ್ಯುತ್ ಕಡಿತ ಉಂಟಾಗಿತ್ತು. ಇದರಿಂದಾಗಿ SNCU ವಾರ್ಡ್‌ನಲ್ಲಿದ್ದ 4 ಶಿಶುಗಳ ಸಾವು ಸಂಭವಿಸಿದೆ.
“ತನಿಖಾ ತಂಡವನ್ನು ರಚಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದ್ದೇನೆ. ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಅಂಬಿಕಾಪುರ ಆಸ್ಪತ್ರೆಗೆ ಹೋಗುತ್ತಿದ್ದೇನೆ. ತನಿಖೆಯ ನಂತರ ಮುಂದಿನ ಕ್ರಮವನ್ನು ಖಚಿತಪಡಿಸಿಕೊಳ್ಳಲಾಗುವುದು” ಎಂದು ಛತ್ತೀಸ್ಗಢ ಅರೋಗ್ಯ ಸಚಿವರು ಹೇಳಿದ್ದಾರೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.