ಇಂದಿನಿಂದ ಪುತ್ತೂರಿನಲ್ಲಿ ಯಕ್ಷೋತ್ಸವ ನಡೆಯಲಿದೆ. ಹನುಮಗಿರಿ ಮೇಳದವರಿಂದ ನಿರಂತರ ಐದು ದಿನಗಳ ಯಕ್ಷಗಾನ ಕಾರ್ಯಕ್ರಮ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ – ಶಿವಪಂಚಾಕ್ಷರಿ ಮಹಿಮೆ, ಕುಮಾರ ವಿಜಯ, ವೇದೋದ್ಧರಣ- ಶ್ರೀನಿವಾಸ ಕಲ್ಯಾಣ, ನಮೋ ರಘುವಂಶದೀಪ ಮತ್ತು ಭಾರತ ಜನನಿ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ (ಹನುಮಗಿರಿ ಮೇಳ) ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಕಾರದೊಂದಿಗೆ ನಿರಂತರ ಐದು ದಿನಗಳ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಈ ಕಾರ್ಯಕ್ರಮ ಈ ತಿಂಗಳ ಐದರಿಂದ ಅಂದರೆ ದಿನಾಂಕ 05.12.2022 ಸೋಮವಾರದಿಂದ ಆರಂಭಗೊಂಡು ದಿನಾಂಕ 09.12.2022ರ ಶುಕ್ರವಾರದ ವರೆಗೆ ನಡೆಯಲಿದೆ. ಯಕ್ಷಗಾನ ಪ್ರದರ್ಶನ 6 ಘಂಟೆಗೆ ಆರಂಭವಾಗಲಿದೆ.
ಈ ಐದು ದಿನಗಳಲ್ಲಿ ಶಿವಪಂಚಾಕ್ಷರಿ ಮಹಿಮೆ, ಕುಮಾರ ವಿಜಯ, ವೇದೋದ್ಧರಣ- ಶ್ರೀನಿವಾಸ ಕಲ್ಯಾಣ, ನಮೋ ರಘುವಂಶದೀಪ ಮತ್ತು ಭಾರತ ಜನನಿ ಎಂಬ ಪ್ರಸಂಗಗಳನ್ನು ಆಡಿ ತೋರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಕರಪತ್ರವನ್ನು ನೋಡಿ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions