Sunday, September 22, 2024
Homeಸುದ್ದಿದಿ|ಎ.ಕೆ.ನಾರಾಯಣ ಶೆಟ್ಟಿ, ಮಹಾಬಲ ಶೆಟ್ಟಿ ನೆನಪಿನಲ್ಲಿ ಯಕ್ಷಾಂಗಣ ಗೌರವ - ಅನುಭವದಿಂದ ಅರ್ಥಧಾರಿಗಳಾದ ಹಿರಿಯರು: ರೊ| ಪ್ರಕಾಶ್...

ದಿ|ಎ.ಕೆ.ನಾರಾಯಣ ಶೆಟ್ಟಿ, ಮಹಾಬಲ ಶೆಟ್ಟಿ ನೆನಪಿನಲ್ಲಿ ಯಕ್ಷಾಂಗಣ ಗೌರವ – ಅನುಭವದಿಂದ ಅರ್ಥಧಾರಿಗಳಾದ ಹಿರಿಯರು: ರೊ| ಪ್ರಕಾಶ್ ಕಾರಂತ

ಮಂಗಳೂರು: ‘ಯಕ್ಷಗಾನ ತಾಳಮದ್ದಳೆಯಲ್ಲಿ ಕೃಷಿ ಮಾಡಿದ ಬಹುತೇಕ ಹಿರಿಯರು ಶಾಲಾ-ಕಾಲೇಜು ಕಲಿತು ವಿದ್ವಾಂಸರಾದವರಲ್ಲ. ಅವರು ಅನುಭವದಿಂದಲೇ ಅರ್ಥಧಾರಿಗಳಾದವರು. ಫರಂಗಿಪೇಟೆ ಪರಿಸರದಲ್ಲಿ ತಾಳಮದ್ದಳೆ ಕೂಟಗಳನ್ನು ಸಂಘಟಿಸಿ, ಕಿರಿಯರಿಗೆ ಮಾರ್ಗದರ್ಶನ ನೀಡಿದವರು ಎ.ಕೆ. ನಾರಾಯಣಶೆಟ್ಟರು. ಅವರ ಬಳಿಕ ಅದನ್ನು ಮುಂದುವರಿಸಿದವರು ಎ.ಕೆ ಮಹಾಬಲ ಶೆಟ್ಟರು’ ಎಂದು ರೋಟರಿ ಜಿಲ್ಲೆ 3181 ರಾಜ್ಯಪಾಲರಾದ ರೊ|ಎನ್. ಪ್ರಕಾಶ್ ಕಾರಂತ್ ಹೇಳಿದ್ದಾರೆ.

          ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನವೇದಿಕೆ ‘ಯಕ್ಷಾಂಗಣ ಮಂಗಳೂರು’  ವತಿಯಿಂದ ಮಂಗಳೂರು ವಿ.ವಿ. ಡಾ.ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದೊಂದಿಗೆ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಸಪ್ತ ವಿಜಯ: ಯಕ್ಷಗಾನ ತಾಳಮದ್ದಳೆ ಸಪ್ತಾಹ – 2022’ ಹತ್ತನೇ ವರ್ಷದ ನುಡಿ ಹಬ್ಬದ ಅಂಗವಾಗಿ ಜರಗಿದ ದಿ. ಎ.ಕೆ. ನಾರಾಯಣಶೆಟ್ಟಿ ಮತ್ತು ಎ.ಕೆ ಮಹಾಬಲ ಶೆಟ್ಟಿ ಸಂಸ್ಮರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ದಿ.ನಾರಾಯಣ ಶೆಟ್ಟಿಯವರ ಧರ್ಮಪತ್ನಿ 93ರ ಹರೆಯದ ಕಾವೇರಿ ಎನ್.ಶೆಟ್ಟಿ ಅವರು ಸಂಸ್ಮರಣ ಜ್ಯೋತಿ ಬೆಳಗಿದರು.

ಕೆ.ಕೆ.ಪೂಂಜಾ ಸನ್ಮಾನ:

     ಹಿರಿಯ ಸಮಾಜ ಸೇವಕ ಮತ್ತು ಪರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಅಧ್ಯಕ್ಷ ಕೆ.ಕೆ.ಪೂಂಜಾ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಮಹೇಶ್ ಮೋಟಾರ್ಸ್ ಮಾಲಕ ಎ.ಕೆ.ಜಯರಾಮ ಶೇಖ ಅಭಿನಂದನಾ ಭಾಷಣ ಮಾಡಿದರು. ಕವಿ, ಸಂಘಟಕ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಸನ್ಮಾನ ಪತ್ರ ವಾಚಿಸಿದರು.

‘ಸಾಧಿತ – ಸಾದರ’ ಬಿಡುಗಡೆ :

      ಕಲಾವಿದ ನಂದಳಿಕೆ ಸುಬ್ರಹ್ಮಣ್ಯ ಬೈಪಾಡಿತ್ತಾಯರು ರಚಿಸಿದ ‘ಸಾಧಿತ – ಸಾದರ’ ಕೃತಿಯನ್ನು ಮುಂಡಪಳ್ಳ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ, ಉದ್ಯಮಿ ಕೆ.ಕೆ.ಶೆಟ್ಟಿ ಅಹಮದ್ ನಗರ ಬಿಡುಗಡೆಗೊಳಿಸಿದರು.

      ಯಕ್ಷದ್ರುವ ಪಟ್ಲ ಪೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಮಂಗಳೂರು ವಿ.ವಿ. ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ  ಪ್ರೊ. ಶ್ರೀಪತಿ ಕಲ್ಲೂರಾಯ ಮತ್ತು ಪದ್ಮಾವತಿ ಜಯರಾಮ ಶೇಖ ಅತಿಥಿಗಳಾಗಿದ್ದರು

      ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂಸ್ಮರಣ ನುಡಿಯೊಂದಿಗೆ ಸ್ವಾಗತಿಸಿದರು ಸಂಚಾಲಕ ಕೆ ರವೀಂದ್ರ ರೈ ಕಲ್ಲಿ ಮಾರು ಕಾರ್ಯಕ್ರಮ ನಿರೂಪಿಸಿದರು ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ವಂದಿಸಿದರು. 

ಉಪಾಧ್ಯಕ್ಷ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ಸಮಿತಿ ಸದಸ್ಯರಾದ ಸಿದ್ದಾರ್ಥ ಅಜ್ರಿ, ಸುಜ್ಯೋತಿ ಶೇಖ ಮತ್ತು ದಿ.ನಾರಾಯಣ ಶೆಟ್ಟರ ಕುಟುಂಬಕರು ಉಪಸ್ಥಿತರಿದ್ದರು.

 ‘ವಿಕ್ರಮಾರ್ಜುನ  ವಿಜಯ’ ತಾಳಮದ್ದಳೆ:

           ‘ ಸಪ್ತ ವಿಜಯ’ ಸರಣಿಯ ಆರನೇ ದಿನ ‘ವಿಕ್ರಮಾರ್ಜುನ ವಿಜಯ’ ತಾಳಮದ್ದಳೆ ಪಟ್ಲ ಸತೀಶ್ ಶೆಟ್ಟಿ ಮತ್ತು ಹರೀಶ ಬಳಂತಿ ಮೊಗರು ಅವರ ಭಾಗವತಿಕೆಯಲ್ಲಿ ಜರಗಿತು. ಜಿಲ್ಲೆಯ ಪ್ರಸಿದ್ಧ ಕಲಾವಿದರು ಅರ್ಥದಾರಿಗಳಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments