
ಮಂಗಳೂರು : ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಯಕ್ಷ ಲೋಕದ ಅಗ್ರಮಾನ್ಯ ಕಲಾವಿದ, ಇತ್ತೀಚೆಗೆ ನಿಧನರಾದ ದಿ. ಕುಂಬ್ಳೆ ಸುಂದರರಾವ್ ರವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಾಲೇಜಿನ ಯಕ್ಷೋತ್ಸವ ಸಮಿತಿ ವತಿಯಿಂದ ನಡೆದ ಈ ಕರ‍್ಯಕ್ರಮದಲ್ಲಿ ವಿವಿಧ ಗಣ್ಯರು ನುಡಿನಮನ ಸಲ್ಲಿಸಿದರು.
ಮಾತಿನ ಲೋಕದ ಮಾಣಿಕ್ಯ:
ದಿ. ಸುಂದರರಾಯರು ಅಪೂರ್ವ ಮಾತುಗಾರ. ತಮ್ಮ ಮಾತಿನಿಂದಲೇ ಯಕ್ಷ ಪ್ರೇಮಿಗಳನ್ನು ಮೋಡಿ ಮಾಡಬಲ್ಲ ಶಕ್ತಿ ಹೊಂದಿದ್ದ ಶ್ರೀಯುತರು ಮಾತಿನ ಲೋಕದ ಮಾಣಿಕ್ಯ ಎಂದು ಯಕ್ಷ ಕಲಾವಿದ, ನಿರೂಪಕ ಪ್ರೊ ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ, ಕಾಲೇಜಿನ ಪ್ರಾಂಶುಪಾಲರಾದ ಡಾ.ತಾರಾನಾಥ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಸದಸ್ಯ ಡಾ. ಮಾಧವ ಮೂಡು ಕೊಣಾಜೆ,
ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಂಜುನಾಥ ರೇವಣ್ಕರ್, ಯಕ್ಷಕಲಾವಿದ ರವಿ ಅಲೆವೂರಾಯ, ಯಕ್ಷೋತ್ಸವ ಸಮಿತಿ ಸಂಚಾಲಕ ಪ್ರೊ ನರೇಶ್ ಮಲ್ಲಿಗೆಮಾಡು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ಪ್ರೊ ಪುಷ್ಪರಾಜ್ ನಿರೂಪಿಸಿದರು.