

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಉಪನಿರ್ದೇಶಕರು(ಆಡಳಿತ), ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಾರವಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉತ್ತರಕನ್ನಡ ಇವರ ಜಂಟಿ ಆಶ್ರಯದಲ್ಲಿ ಸೈಂಟ್ ಮೈಕೆಲ್ ಕಾನ್ವೆಂಟ್ ಕಾರವಾರ
ಇಲ್ಲಿ ನವೆಂಬರ್ 24 ರಿಂದ 26 ವರೆಗೆ ನಡೆದ ರಾಜ್ಯಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬಾಲಕ, ಬಾಲಕಿಯರ ಚೆಸ್ ಪಂದ್ಯಾವಳಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಾದ ಕೆ.ಧನುಷ್ ರಾಮ್, ಕೆ.ಪ್ರಣೀಲ್ ರೈ ಹಾಗೂ 9ನೇ ತರಗತಿಯ ಸುಶ್ಮಿತಾ ರಾವ್ ಭಾಗವಹಿಸಿದ್ದು,
ಇವರ ಪೈಕಿ ಧನುಷ್ ರಾಮ್ (ಶ್ರೀ ದಿನೇಶ್ ಪ್ರಸನ್ನ ಹಾಗೂ ಶ್ರೀಮತಿ ಉಮಾ.ಡಿ. ಪ್ರಸನ್ನ ದಂಪತಿ ಪುತ್ರ) ಪ್ರೌಢ ಶಾಲಾ ಬಾಲಕರ ವಿಭಾಗದಲ್ಲಿ ರಾಷ್ಟ್ರಮಟ್ಟದ ಚೆಸ್ ಪಂದ್ಯಾವಳಿಗೆ ಆಯ್ಕೆಯಾಗಿರುತ್ತಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.