Saturday, January 18, 2025
Homeಯಕ್ಷಗಾನನವೆಂಬರ್ 27, ಭಾನುವಾರ ಕಿಶೋರ ಯಕ್ಷ ಸಂಭ್ರಮ- 2022 ಉದ್ಘಾಟನೆ.

ನವೆಂಬರ್ 27, ಭಾನುವಾರ ಕಿಶೋರ ಯಕ್ಷ ಸಂಭ್ರಮ- 2022 ಉದ್ಘಾಟನೆ.

ಉಡುಪಿ :ಕಿಶೋರ ಯಕ್ಷಗಾನ ಸಂಭ್ರಮ- 2022, ನವೆಂಬರ್ 27, ಭಾನುವಾರ ಅಪರಾಹ್ನ 3.45 ಗಂಟೆಗೆ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಆರ೦ಭವಾಗಲಿದೆ.

ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಯಕ್ಷ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರೂ,ಉಡುಪಿ ಶಾಸಕರೂ ಆದ ಶ್ರೀ ಕೆ.ರಘುಪತಿ ಭಟ್‌ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಟ್ರಸ್ಟ್ ಉಪಾಧ್ಯಕ್ಷರೂ, ಅಂಬಲಪಾಡಿ ದೇವಳದ ಧರ್ಮದರ್ಶಿಗಳೂ ಆದ ಡಾ. ನಿ. ಬೀ. ವಿಜಯ ಬಲ್ಲಾಳ, ಉಜ್ವಲ ಡೆವಲಪರ್ಸ್ ನ  ಪ್ರವರ್ತಕರಾದ ಶ್ರೀ ಪಿ. ಪುರುಷೋತ್ತಮ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ, ಪರ್ಯಾಯ ಶ್ರೀ ಕೃಷ್ಣಾಪುರ ಮಠದ ದಿವಾನರಾದ ಶ್ರೀ ವರದರಾಜ ಭಟ್‌ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.

ಟ್ರಸ್ಟ್ ಉಪಾಧ್ಯಕ್ಷರುಗಳಾದ ಡಾ. ನಿ. ಬೀ. ವಿಜಯ ಬಲ್ಲಾಳ್ ಮತ್ತು ಶ್ರೀ ವರದರಾಜ ಭಟ್ ಹಾಗೂ ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ.ಗ೦ಗಾಧರ ರಾವ್ ಉಪಸ್ಥಿತರಿರುವರು.

ಉಡುಪಿ ಸನಿಹದ 30 ಪ್ರೌಢಶಾಲೆಗಳ ಪ್ರದರ್ಶನವು ಡಿಸೆಂಬರ್ 11ರ ತನಕ ರಾಜಾಂಗಣದಲ್ಲಿ ಪ್ರದರ್ಶನಗೊಳ್ಳಲಿದ್ದು, ಉಳಿದ 14 ಪ್ರೌಢ ಶಾಲೆಗಳ ಪ್ರದರ್ಶನವು ಡಿಸೆಂಬರ್ 13 ರಿಂದ 20 ರ ತನಕ ಬ್ರಹ್ಮಾವರದಲ್ಲಿ ಜರಗಲಿದೆ.ಪ್ರತೀ ದಿನ 2 ಶಾಲೆಗಳ ಪ್ರದರ್ಶನ ನಡೆಯಲಿದೆ.ಈ ಮಹಾ ಅಭಿಯಾನದಲ್ಲಿ 44 ಶಾಲೆಗಳ ಸುಮಾರು1400 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಉದ್ಘಾಟನೆಯ ಬಳಿಕ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳಿಂದ ಯಕ್ಷಗಾನ ‘ಮಾಯಾಪುರಿ ಮಹಾತ್ಮೆ’ ಹಾಗೂ ಇಂದಿರಾನಗರದ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಯಕ್ಷಗಾನ‘ ವಿದ್ಯುನ್ಮತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments