

ಕೋಟೂರು ಯಕ್ಷತೂಣೀರ ಸಂಪ್ರತಿಷ್ಠಾನದ ಆಶ್ರಯದಲ್ಲಿ ದಿನಾಂಕ 26.11.2022ನೇ ಶನಿವಾರ ರಾತ್ರಿ ಘಂಟೆ 9ರಿಂದ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಸೇವಾರೂಪವಾಗಿ ಅಜಪುರದ ಸುಬ್ಬ ವಿರಚಿತ, ಹರಿಕೃಷ್ಣ ಹೊಳ್ಳ ಬ್ರಹ್ಮಾವರ ಇವರಿಂದ ಪರಿಷ್ಕರಿಸಲ್ಪಟ್ಟ ಪಾರಿಜಾತ ಪ್ರಸಂಗದ ಭಾಗವಾದ “ನರಕಾಸುರ ಮೋಕ್ಷ” ಕಾಲಮಿತಿಯ ಯಕ್ಷಗಾನ ಬಯಲಾಟವು ಜರಗಲಿದೆ.
ಪ್ರತಿಷ್ಠಾನದ ಕಲಾವಿದರು ಹಾಗೂ ಆತಿಥಿ ಕಲಾವಿದರ ಕೂಡುವಿಕೆಯಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಹಾಡುಗಾರಿಕೆಯಲ್ಲಿ ತಲ್ಪಣಾಜೆ ಸಹೋದರರಾದ ವೆಂಕಟ್ರಮಣ ಭಟ್ ಹಾಗೂ ಶಿವಶಂಕರ ಭಟ್, ಹಿಮ್ಮೇಳದಲ್ಲಿ ಅಡ್ಕ ಕೃಷ್ಣ ಭಟ್, ಅಂಬೆಮೂಲೆ ಶಿವಶಂಕರ ಭಟ್, ಪುಂಡಿಕಾಯಿ ರಾಜೇಂದ್ರಪ್ರಸಾದ್, ಗಿರೀಶ್ ಕೋಳಿಯಡ್ಕ ಸಹಕರಿಸಲಿರುವರು.
ಪಾತ್ರವರ್ಗದಲ್ಲಿ ಅಡ್ಕ ಸುಬ್ರಹ್ಮಣ್ಯ ಭಟ್, ಡಾ. ಶಿವಕುಮಾರ್ ಅಡ್ಕ, ಧರ್ಮೇಂದ್ರ ಮಾಸ್ಟರ್ ಕೂಡ್ಲು, ಮಹೇಶ್ ಎಡನೀರು, ಪೃಥ್ವಿ ಪೆರುವೋಡಿ, ನಿರಂಜನ ಬಳ್ಳುಳ್ಳಾಯ ಮುಳಿಯಾರು, ಗುರುಪ್ರಸಾದ್ ಮುಳಿಯಾರು, ಶರತ್ ರಾವ್ ಕಾರಡ್ಕ, ಯತಿರಾಜ್ ಅಮಕ್ಕಾರು, ಮನೀಶ್ ಮುಳಿಯಾರು, ದೀಕ್ಷಾ ಅಂಬುಕುಂಜೆ, ಯಶಸ್ ಮಜಕ್ಕಾರು, ಅದ್ವತ್ ಅಗ್ನಿಹೋತ್ರಿ ಹಾಗೂ ಧನ್ವಿತ್ ಮುಳಿಯಾರು ಭಾಗವಹಿಸಲಿದ್ದಾರೆ.
ವರ್ಣಾಲಂಕಾರ ಮತ್ತು ವಸ್ತ್ರಾಲಂಕಾರದಲ್ಲಿ ರಾಕೇಶ್ ಗೋಳಿಯಡ್ಕ ಹಾಗೂ ಬಳಗದವರು ಸಹಕರಿಸಲಿದ್ದಾರೆ. ವೇದಿಕೆ, ಧ್ವನಿ ಹಾಗೂ ಬೆಳಕಿನ ವ್ಯವಸ್ಥೆಯನ್ನು ಶ್ರೀ ಕ್ಷೇತ್ರದ ಆಶ್ರಯದಲ್ಲಿರುವ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಮಂಡಳಿಯವರು ಒದಗಿಸಿಕೊಡಲಿದ್ದಾರೆ.
ಕಲಾಭಿಮಾನಿಗಳ ತುಂಬು ಹೃದಯದ ಪ್ರೊತ್ಸಾಹವನ್ನು ಬಯಸುವುದಾಗಿ ಯಕ್ಷತೂಣಿರ ಸಂಪ್ರತಿಷ್ಠಾನದ ಪದಾಧಿಕಾರಿಗಳು ತಿಳಿಸಿದ್ದಾರೆ.