ಜೈಲು ಸೇರಿರುವ ಅಕ್ರಮ ಹಣ ವರ್ಗಾವಣೆ ಆರೋಪಿ ಮತ್ತು ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್‍ಗೆ ತಿಹಾರ್ ಜೈಲಿನಲ್ಲಿ ವಿಐಪಿ ಟ್ರೀಟ್‍ಮೆಂಟ್ ನೀಡಲಾಗುತ್ತಿದೆ ಎಂದು ಬಿಜೆಪಿ ವೀಡಿಯೊ ಬಿಡುಗಡೆ ಸಹಿತ ಆರೋಪಿಸಿತ್ತು.

ಇದಕ್ಕೆ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಸತ್ಯೇಂದ್ರ ಜೈನ್‍ಗೆ ತಿಹಾರ್ ಜೈಲಿನಲ್ಲಿ ಫಿಸಿಯೋಥೆರಪಿ ಮಾಡಲಾಗಿದೆ. ಅದು ಮಸಾಜ್ ಅಲ್ಲ ಎಂದು ಬಿಜೆಪಿ ಆರೋಪವನ್ನು ಲೇವಡಿ ಮಾಡಿದ್ದಾರೆ.
ಆದರೆ ಇದೀಗ ಕೇಜ್ರಿವಾಲ್ ಮತ್ತೊಮ್ಮೆ ತೀವ್ರ ಮುಖಭಂಗ ಅನುಭವಿಸಿದ್ದಾರೆ. ತಿಹಾರ್ ಜೈಲಿನ ಅಧಿಕೃತ ಮೂಲಗಳ ಪ್ರಕಾರ ಜೈಲಿನಲ್ಲಿರುವ ದೆಹಲಿಯ ಮಂತ್ರಿ ಸತ್ಯೇಂದ್ರ ಜೈನ್‌ಗೆ ಮಸಾಜ್ ಸೇವೆ ಮಾಡಿದ್ದು ಕೈದಿಯಾಗಿರುವ ರಿಂಕು.
ಅವನು ಅತ್ಯಾಚಾರ ಪ್ರಕರಣದಲ್ಲಿ ಖೈದಿಯಾಗಿದ್ದಾನೆ. ಆತನ ಮೇಲೆ (ಮಸಾಜ್ ಮಾಡಿದ ರಿಂಕು ಮೇಲೆ) ಪೋಕ್ಸೋ ಕಾಯಿದೆಯ 6 ಮತ್ತು IPC ಯ 376, 506 ಮತ್ತು 509 ರ ಆರೋಪಗಳನ್ನು ಹೊರಿಸಲಾಗಿದೆ. ಆತ ಫಿಸಿಯೋಥೆರಪಿಸ್ಟ್ ಅಲ್ಲ ಎಂದು ತಿಹಾರ್ ಜೈಲಿನ ಅಧಿಕೃತ ಮೂಲಗಳು ಹೇಳಿವೆ.
ಇದರಿಂದ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಮ್ಮ ಸುಳ್ಳು ಹೇಳಿಕೆಗಳಿಂದ ತೀವ್ರ ಮುಜುಗರ ಅನುಭವಿಸಿದ್ದಾರೆ.
