ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಶಿಕ್ಷಕಿಯೊಬ್ಬರು ಮೃತಪಟ್ಟಿದ್ದಾರೆ.
ಹತ್ಯೆಗೀಡಾದವರನ್ನು ಕೇರಳದ ಅಲಪ್ಪುಳದ ಕಾಯಂಕುಲಂ ಎಸ್ ಎನ್ ಶಾಲೆಯ ಶಿಕ್ಷಕಿ ಸುಮಂ (51) ಎಂದು ಗುರುತಿಸಲಾಗಿದೆ. ಈಕೆ ಭರಣಿಕಾವು ತೆಕ್ಕೆಕರ ಪಾಲಮುಟ್ಟೋಮ್‌ನ ಸ್ಥಳೀಯ ನಿವಾಸಿಯಾಗಿದ್ದರು ಎಂದು ತಿಳಿದುಬಂದಿದೆ.
ಕಾಯಂಕುಲಂ ಥಟ್ಟರಂಬಲಂ ರಸ್ತೆಯ ತಟ್ಟವಾಝಿ ಜಂಕ್ಷನ್‌ನಲ್ಲಿ ಸೋಮವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದೆ. ಅವರು ಮನೆಯಿಂದ ತನ್ನ ಸ್ಕೂಟರಿನಲ್ಲಿ ಎಂದಿನಂತೆ ಶಾಲೆಗೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.

