Sunday, January 19, 2025
Homeಸುದ್ದಿಕಾರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ - ಬಂಧಿತ ಡಿಂಪಲ್ ಲಾಂಬಾಗೆ ಸೆಕ್ಸ್ ರಾಕೆಟ್‌ಗಳ ಸಂಪರ್ಕ - ಮಾಡೆಲಿಂಗ್...

ಕಾರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ – ಬಂಧಿತ ಡಿಂಪಲ್ ಲಾಂಬಾಗೆ ಸೆಕ್ಸ್ ರಾಕೆಟ್‌ಗಳ ಸಂಪರ್ಕ – ಮಾಡೆಲಿಂಗ್ ನೆಪದಲ್ಲಿ ಹುಡುಗಿಯರ ಕಳ್ಳಸಾಗಣೆ

ಕೊಚ್ಚಿ: ಕೊಚ್ಚಿ ಸೆಕ್ಸ್ ರಾಕೆಟಿಂಗ್‌ನ ಕೇಂದ್ರವಾಗುತ್ತಿದೆ. ಡ್ರಗ್ಸ್, ಡಿಜೆ ಪಾರ್ಟಿಗಳು ಮತ್ತು ಫ್ಯಾಶನ್ ಶೋಗಳ ನೆಪದಲ್ಲಿ ಕೊಚ್ಚಿಯಲ್ಲಿ ಲೈಂಗಿಕ ದಂಧೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಹುಡುಗಿಯರನ್ನು ಮಾಡೆಲ್‌ಗಳಾಗಿ ಸೆಕ್ಸ್‌ ರಾಕೆಟ್‌ಗಳು ಮಾರಾಟ ಮಾಡುತ್ತಿವೆ. ಕೊಚ್ಚಿಯಲ್ಲಿ 19 ವರ್ಷದ ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆಯ ತನಿಖೆ ವೇಳೆ ಪೊಲೀಸರಿಗೆ ಇಂತಹ ಗ್ಯಾಂಗ್‌ಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಬಂಧಿತರು ಅಂತಹ ಗ್ಯಾಂಗ್‌ಗಳೊಂದಿಗೆ ಸಂಪರ್ಕ ಹೊಂದಿದ್ದಾರೆಂದು ನಂಬಲಾಗಿದೆ.

ಬಂಧಿತರ ಮೊಬೈಲ್ ಫೋನ್‌ಗಳಿಂದ ಈ ಬಗ್ಗೆ ಮಹತ್ವದ ಮಾಹಿತಿ ಲಭಿಸಿದೆ ಎಂದು ವರದಿಯಾಗಿದೆ. ಆದರೆ, ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ಸಿದ್ಧರಿಲ್ಲ. ಸೆಕ್ಸ್ ರಾಕೆಟ್ ಗ್ಯಾಂಗ್‌ಗಳು ಮುಖ್ಯವಾಗಿ ಇತರ ರಾಜ್ಯಗಳ ಹುಡುಗಿಯರನ್ನು ಸಾಗಿಸುತ್ತವೆ. ಅಲ್ಲದೇ ಹೆಚ್ಚಿನ ಮಹಿಳೆಯರನ್ನು ವಂಚಿಸುತ್ತಿದ್ದಾರೆ.

ಮಾಡೆಲಿಂಗ್‌ನಲ್ಲಿ ಹುಡುಗಿಯರಿಗೆ ದೊಡ್ಡ ಅವಕಾಶಗಳ ಭರವಸೆ ಇದೆ ಎಂದು ನಂಬಿಸುತ್ತಾರೆ. ಅದಕ್ಕೆ ಆಕರ್ಷಿತರಾಗಿ ಬರುವ ಹುಡುಗಿಯರನ್ನು ಡ್ರಗ್ಸ್, ಡಿಜೆ ಪಾರ್ಟಿಗಳಿಗೆ ಕರೆದೊಯ್ದು ನಂತರ ಕಂಠಮಟ್ಟ ಕುಡಿಸಿ ಲೈಂಗಿಕ ದಂಧೆಗೆ ಒಪ್ಪಿಸುತ್ತಾರೆ.

ಮೊನ್ನೆ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಲ್ಲಿ ಒಬ್ಬ ಮಹಿಳೆ ಡಿಂಪಲ್ ಲಾಂಬಾ ಅಲಿಯಾಸ್ ಡಾಲಿ ಎಂದು ಪೊಲೀಸರಿಗೆ ಈ ಹಿಂದೆ ಮಾಹಿತಿ ಸಿಕ್ಕಿತ್ತು. ಡಿಂಪಲ್ ಕೊಚ್ಚಿಯ ವಿವಿಧೆಡೆ ಡ್ರಗ್ ಪಾರ್ಟಿ ನಡೆಸುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

ಕೊಚ್ಚಿಯಲ್ಲಿ ನಡೆದ ಫ್ಯಾಷನ್ ಶೋಗಳಲ್ಲೂ ಭಾಗವಹಿಸಿದ್ದರು. ಕೆಲವು ಫ್ಯಾಶನ್ ಶೋಗಳಲ್ಲಿ ಡಿಂಪಲ್ ಚಿತ್ರದೊಂದಿಗೆ ಜಾಹೀರಾತು ನೀಡಲಾಯಿತು. ಜನರನ್ನು ಒಟ್ಟುಗೂಡಿಸಲು ಇದನ್ನು ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಾದ ಕೊಡುಂಗಲ್ಲೂರು ಮೂಲದ ವಿವೇಕ್ (26), ನಿತಿನ್ (25) ಮತ್ತು ಸುಧೀಪ್ (27) ರನ್ನು ಡಿಂಪಲ್‌ಗೆ ಈಗಾಗಲೇ ತಿಳಿದಿತ್ತು. ವಿವೇಕ್ ಮತ್ತು ಡಿಂಪಲ್ ಒಟ್ಟಿಗೆ ಪ್ರಯಾಣಿಸಿದ್ದಕ್ಕೆ ಸಾಕ್ಷಿಯೂ ಸಿಕ್ಕಿದೆ.

ಪಾರ್ಟಿ ವೇಳೆ ಡಿಂಪಲ್ ತನ್ನನ್ನು ಬಲವಂತವಾಗಿ ಪಾರ್ಟಿಗೆ ಕರೆದೊಯ್ದು ಬಿಯರ್ ನಲ್ಲಿ ಪೌಡರ್ ಬೆರೆಸಿದ್ದಳು ಎಂದು ರೂಪದರ್ಶಿ ಹೇಳಿಕೆ ನೀಡಿದ್ದರು. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದರೆ ಮಾತ್ರ ಸ್ಪಷ್ಟತೆ ಸಿಗಲಿದೆ. ನಾಲ್ವರು ಆರೋಪಿಗಳನ್ನು ಕನಿಷ್ಠ ಐದು ದಿನಗಳ ಕಾಲ ಕಸ್ಟಡಿಗೆ ಪಡೆದು ವಿವರವಾಗಿ ವಿಚಾರಣೆ ನಡೆಸಲಾಗುವುದು ಎಂದು ತನಿಖಾ ತಂಡ ಈಗಾಗಲೇ ನಿರ್ಧರಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments