ಚಲಿಸುತ್ತಿದ್ದ ಕಾರಿನೊಳಗೆ 19 ವರ್ಷದ ಕಾಸರಗೋಡು ಮೂಲದ ಮಾಡೆಲ್ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳದ ಕೊಚ್ಚಿಯಲ್ಲಿ ಗುರುವಾರ ತಡರಾತ್ರಿ ಚಲಿಸುತ್ತಿದ್ದ ಕಾರಿನಲ್ಲಿ 19 ವರ್ಷದ ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರ್ನಾಕುಲಂ ಪೊಲೀಸರು ಮೂವರು ಪುರುಷರು ಮತ್ತು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ನಿನ್ನೆ ರಾತ್ರಿ ನಡೆದ ಘಟನೆಯಲ್ಲಿ ಓರ್ವ ಮಹಿಳೆ ಹಾಗೂ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿ ಮೂವರು ಯುವಕರು ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಕಾಸರಗೋಡು ಮೂಲದ ಮಾಡೆಲ್ ಯುವತಿ ಕೆಲ ದಿನಗಳ ಹಿಂದೆ ಇಲ್ಲಿಗೆ ಬಂದಿದ್ದರು ಯುವ ಮಾಡೆಲ್ ನಿನ್ನೆ ರಾತ್ರಿ 8:30 ರ ಸುಮಾರಿಗೆ ತನ್ನ ಸ್ನೇಹಿತೆಯೊಂದಿಗೆ ಕೊಚ್ಚಿಯ ಬಾರ್‌ಗೆ ಬಂದಿದ್ದಾಳೆ. ರಾತ್ರಿ 10 ಗಂಟೆಗೆ ಬಾರ್‌ನಲ್ಲಿ ಕುಸಿದು ಬಿದ್ದಿದ್ದಾಳೆ.
ಈ ಹಿನ್ನೆಲೆಯಲ್ಲಿ ಯುವಕರು ಆಕೆಯನ್ನು ಆಕೆಯ ನಿವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ಆಕೆಯ ಮಹಿಳಾ ಸ್ನೇಹಿತೆ ಕಾರಿನಲ್ಲಿ ಬರಲಿಲ್ಲ. ಬಳಿಕ ಕಾರಿನಲ್ಲಿ ನಗರದೆಲ್ಲೆಡೆ ಸುತ್ತಾಡಿದ ಯುವಕರು ಕಾರಿನೊಳಗೆ ರೂಪದರ್ಶಿಯ ಮೇಲೆ ಸರದಿಯಂತೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಯನ್ನು ಕಾಕ್ಕನಾಡಿನ ಆಕೆಯ ಮನೆಯ ಮುಂದೆ ಡ್ರಾಪ್ ಮಾಡಿದ್ದಾರೆ.
ಬಳಿಕ ಮಹಿಳೆ ತನ್ನ ಸ್ನೇಹಿತೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಇಂದು ಆಕೆ ತನ್ನ ಸ್ನೇಹಿತೆಗೆ ವಿಷಯ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆಯನ್ನು ಸ್ನೇಹಿತೆ ಪೊಲೀಸರಿಗೆ ತಿಳಿಸಿದ್ದಾರೆ. ಇಂದು ಬೆಳಗ್ಗೆ ದೂರು ಸ್ವೀಕರಿಸಿದ ಪೊಲೀಸರು ಯುವತಿ ಹೋದ ಬಾರ್ ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಯುವಕರು ನೀಡಿದ ಗುರುತಿನ ದಾಖಲೆಗಳಲ್ಲಿ ನಕಲಿ ವಿಳಾಸ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಹಿಳೆಯ ಸ್ನೇಹಿತೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆಕೆಯನ್ನು ವಿಚಾರಿಸಿದಾಗ ಮೂವರು ಯುವಕರು ಕೊಡುಂಗಲ್ಲೂರು ಮೂಲದವರು ಎಂದು ತಿಳಿದು ಬಂದಿದೆ. ಶುಕ್ರವಾರ ಸಂಜೆ ವೇಳೆಗೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಕೊಡುಂಗಲ್ಲೂರಿನ ವಿವೇಕ್, ನಿತಿನ್ ಮತ್ತು ಸುಧೀಪ್ ಮತ್ತು ರಾಜಸ್ಥಾನದ ಡಿಂಪಲ್ ಲವಾ ಎರ್ನಾಕುಲಂ ದಕ್ಷಿಣ ಪೊಲೀಸರ ವಶದಲ್ಲಿದ್ದಾರೆ.
ಗುರುವಾರ ರಾತ್ರಿ ಎರ್ನಾಕುಲಂನ ಅಟ್ಲಾಂಟಿಸ್ ಹೋಟೆಲ್‌ನಲ್ಲಿ ಘಟನೆ ನಡೆದಿದೆ. ಇಲ್ಲಿ ನಡೆದ ಡಿಜೆ ಪಾರ್ಟಿ ಬಳಿಕ ರಾಜಸ್ಥಾನ ಮಹಿಳೆ ಡಿಂಪಲ್ ಲಾವಾ ಜೊತೆ ಮದ್ಯ ಸೇವಿಸುತ್ತಿದ್ದ ಯುವತಿ ಕುಸಿದು ಬಿದ್ದಿದ್ದಾಳೆ. ಸಹಾಯಕ್ಕೆ ಬಂದ ವ್ಯಕ್ತಿಗಳು ಕಾಕ್ಕನಾಡ್‌ನಲ್ಲಿರುವ ಆಕೆಯ ನಿವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ ಯುವತಿಯ ಸ್ನೇಹಿತೆಯಾದ ರಾಜಸ್ಥಾನ ಮಹಿಳೆಯನ್ನು ಅಲ್ಲಿಂದ ಕಳುಹಿಸಿದ್ದಾರೆ.
ಆಮೇಲೆ ವಿವೇಕ್ ಅವರ ಹೊಚ್ಚಹೊಸ ಮಹೀಂದ್ರಾ ಥಾರ್‌ನಲ್ಲಿ ಆರೋಪಿಗಳು ನಗರದಲ್ಲಿ ಸುತ್ತಾಡಿದ ನಂತರ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಾಡೆಲ್ ವಾಸವಿದ್ದ ಕಾಕ್ಕನಾಡು ಇನ್ಫೋಪಾರ್ಕ್ ಬಳಿಯ OYO ಸ್ಟೆ ಎದುರು ಮಹಿಳೆಯನ್ನು ಇಳಿಸಲಾಗಿತ್ತು.
ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಇಂದು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪೊಲೀಸರು ಆಕೆಯನ್ನು ಕಲಮಸೇರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮಹಿಳಾ ಸ್ನೇಹಿತೆ ಉದ್ದೇಶಪೂರ್ವಕವಾಗಿ ಕಾರಿನಲ್ಲಿ ಹೋಗದಿರಲು ನಿರ್ಧರಿಸಿದ್ದಾರೆ ಎಂದು ತೀರ್ಮಾನಿಸಿ ಅವಳನ್ನು ಬಂಧಿಸಲಾಗಿದೆ. ಬಾರ್‌ನಲ್ಲಿ ಯುವಕರು ನೀಡಿದ ವಿಳಾಸಗಳು ನಕಲಿಯಾಗಿತ್ತು. ರಾಜಸ್ಥಾನದ ಮಹಿಳೆಯನ್ನು ವಿಚಾರಣೆ ನಡೆಸಿದಾಗ ಪೊಲೀಸರಿಗೆ ಮೂಲ ಮಾಹಿತಿ ಸಿಕ್ಕಿದೆ. ಪ್ರಕರಣವನ್ನು ದಕ್ಷಿಣ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಮಹೀಂದ್ರ ಥಾರ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions