ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಛೇರಿ, ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮಂಗಳೂರು, ಸರಕಾರಿ ಪ್ರೌಢಶಾಲೆ ಅತ್ತಾವರ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನವಂಬರ್ 15 ಮತ್ತು 16 ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ರೀಡಾಕೂಟದ ಪ್ರಾಥಮಿಕ ವಿಭಾಗದಲ್ಲಿ
ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ದಿವಿಜ್ಞಾ (ಕಲ್ಲರ್ಪೆ ಶಿವಪ್ರಸಾದ್ ಮತ್ತು ಪವಿತ್ರಾ ದಂಪತಿ ಪುತ್ರಿ) 100ಮೀ ಪ್ರಥಮ, 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 8ನೇ ತರಗತಿಯ ಕೃತಿ.ಕೆ (ಬನ್ನೂರು ಕೊರಗಪ್ಪ ಗೌಡ ಮತ್ತು ವನಿತಾ.ಎ ದಂಪತಿ ಪುತ್ರಿ) 400 ಮೀ ಪ್ರಥಮ, 600ಮೀ ಪ್ರಥಮ, 200ಮೀ ತೃತೀಯ, 4×100 ಮೀ ರಿಲೇ ಪ್ರಥಮ,
8ನೇ ತರಗತಿಯ ಡಿಂಪಲ್ ಶೆಟ್ಟಿ(ಮೇರ್ಲ ಉದಯ ಶೆಟ್ಟಿ ಹಾಗೂ ಸುನೀತಾ ಶೆಟ್ಟಿ ದಂಪತಿ ಪುತ್ರಿ) 4×100 ಮೀ ರಿಲೇ ಪ್ರಥಮ, 100ಮೀ ದ್ವಿತೀಯ, 8ನೇ ತರಗತಿಯ ಅಮೃತಾ. ಬಿ.ಎ (ಶಿಕ್ಷಕ ಬನ್ನೂರು ಪಟ್ಟೆ ಅಮರನಾಥ್ ಹಾಗೂ ಶಿಕ್ಷಕಿ ಲತಾ ಕುಮಾರಿ ದಂಪತಿ ಪುತ್ರಿ) 4×100ಮೀ ರಿಲೇ ಪ್ರಥಮ, 8ನೇ ತರಗತಿಯ ಶ್ರೀವರ್ಣಾ (ಪಾಲೆತ್ತಡಿ ಧರ್ಣಪ್ಪ ಗೌಡ ಮತ್ತು ಮಮತಾ.ಪಿ ದಂಪತಿ ಪುತ್ರಿ) 4×100ಮೀ ರಿಲೇ ಪ್ರಥಮ,
17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 10ನೇ ತರಗತಿಯ ವಂಶಿ.ಬಿ.ಕೆ (ಬಪ್ಪಳಿಗೆ ಕಮಲಾಕ್ಷ ಹಾಗೂ ಜಯಲತಾ ದಂಪತಿ ಪುತ್ರಿ) 4×100 ಮೀ ರಿಲೇ ಪ್ರಥಮ,100ಮೀ ತೃತೀಯ, 10ನೇ ತರಗತಿಯ ಬಿ.ಲಿಖಿತಾ ರೈ (ಬಿ.ಜಗನ್ನಾಥ ರೈ ಮತ್ತು ಗೀತಾ.ಜೆ.ರೈ ದಂಪತಿ ಪುತ್ರಿ) 4×100 ಮೀ ರಿಲೇ ಪ್ರಥಮ, 9ನೇ ತರಗತಿಯ ಸಾನ್ವಿ ಎಸ್.ಪಿ (ಸೇನಾ ಯೋಧ ಪಳಂಬೆ ಸುಂದರ ಪೂಜಾರಿ ಹಾಗೂ ಶಿಕ್ಷಕಿ ಭವಿತಾ ದಂಪತಿ ಪುತ್ರಿ) 4×100 ಮೀ ರಿಲೇ ಪ್ರಥಮ, 9ನೇ ತರಗತಿಯ ರಿದ್ಧಿ ಶೆಟ್ಟಿ (ಚಿದಾನಂದ ಹಾಗೂ ಸತ್ಯವತಿ.ಸಿ.ಶೆಟ್ಟಿ ದಂಪತಿ ಪುತ್ರಿ) 4×100 ಮೀ ರಿಲೇ ಪ್ರಥಮ,
14ರ ವಯೋಮಾನದ ಬಾಲಕರ ವಿಭಾಗದಲ್ಲಿ 7ನೇ ತರಗತಿಯ ಮನ್ವಿತ್ ನೆಕ್ಕರೆ (ಉಮೇಶ್ ನೆಕ್ಕರೆ ಮತ್ತು ಕವಿತಾ ನೆಕ್ಕರೆ ದಂಪತಿ ಪುತ್ರ) 4×100 ಮೀ ರಿಲೇ ಪ್ರಥಮ, 80 ಮೀ ಹರ್ಡಲ್ಸ್ ತೃತೀಯ, 8ನೇ ತರಗತಿಯ ಕೃಪಾಲ್.ಪಿ.ಕೆ (ಕೆಮ್ಮಾಯಿ ಪ್ರಕಾಶ್ ಮತ್ತು ಸುನೀತಾ ದಂಪತಿ ಪುತ್ರ) 4×100 ಮೀ ರಿಲೇ ಪ್ರಥಮ, 8ನೇ ತರಗತಿಯ ಮನ್ವಿತ್ ರೈ (ಮಂಜುನಾಥ್ ರೈ ಹಾಗೂ ಶಿಕ್ಷಕಿ ಪ್ರವೀಣಾ ರೈ ದಂಪತಿ ಪುತ್ರ) 4×100 ಮೀ ರಿಲೇ ಪ್ರಥಮ, 8ನೇ ತರಗತಿಯ ಮನೋಹರ್ (ಪರ್ಲಡ್ಕ ಮಿಶ್ರಾ ರಾಮ್ ಹಾಗೂ ಲಕ್ಷ್ಮೀ ದಂಪತಿ ಪುತ್ರ) 4×100 ಮೀ ರಿಲೇ ಪ್ರಥಮ ಬಹುಮಾನ ಪಡೆದಿರುತ್ತಾರೆ.
ಅದೇ ರೀತಿ 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕೃತಿ. ಕೆ ಪುತ್ತೂರು ತಾಲೂಕಿನಲ್ಲಿ ಏಕೈಕ ವೈಯಕ್ತಿಕ ಚಾಂಪಿಯನ್ ಶಿಪ್ ಗೆದ್ದುಕೊಂಡಿದ್ದಾರೆ. ಅಲ್ಲದೇ 14ರ ವಯೋಮಾನದ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಗಳನ್ನೂ ಕೂಡ ಗೆದ್ದುಕೊಂಡ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಒಟ್ಟು 13 ಮಂದಿ ಕ್ರೀಡಾಪಟುಗಳು 6 ಪ್ರಥಮ ಸ್ಥಾನಗಳೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ದೈಹಿಕ ಶಿಕ್ಷಣ ವಿಭಾಗ ಮುಖ್ಯಸ್ಥರಾದ ಶ್ರೀ ಭಾಸ್ಕರ ಗೌಡ ಮುಂಗ್ಲಿಮನೆಯವರ ಮಾರ್ಗದರ್ಶನದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಆಶಾಲತಾ, ಶ್ರೀಮತಿ ನಮಿತಾ, ಶ್ರೀ ದೀಪಕ್, ಶ್ರೀಮತಿ ರಶ್ಮಿ, ಶ್ರೀ ಪವನ್ ಕುಮಾರ್ ಇವರ ಸಹಕಾರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಗಿರೀಶ್ ಕಣಿಯಾರು ಮತ್ತು ಶ್ರೀಮತಿ ವಾಣಿಶ್ರೀ ಇವರುಗಳು ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ತರಬೇತುಗೊಳಿಸಿರುತ್ತಾರೆ ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions