ಔರಂಗಾಬಾದ್‌ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಟ್ಯೂಷನ್ ಮುಗಿಸಿ ತನ್ನ ಮನೆಗೆ ಹಿಂದಿರುಗುತ್ತಿದ್ದಾಗ, ಚಾಲಕ ತನ್ನ ಮೇಲೆ ಕಿರುಕುಳ ನೀಡಲು ಯತ್ನಿಸಿದ ನಂತರ ಚಲಿಸುತ್ತಿದ್ದ ಆಟೋರಿಕ್ಷಾದಿಂದ ಜಿಗಿಯಲು ನಿರ್ಧರಿಸಿದಳು.

ಈ ಘಟನೆ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ವಾಹನದ ಚಾಲಕ ತನಗೆ ಕಿರುಕುಳ ನೀಡುತ್ತಿದ್ದಾಗ ಬಾಲಕಿಯೊಬ್ಬಳು ವೇಗವಾಗಿ ತಾನು ಹೋಗುತ್ತಿದ್ದ ಆಟೋರಿಕ್ಷಾದಿಂದ ಜಿಗಿದಿದ್ದಾಳೆ.
ಮೂಲಗಳ ಪ್ರಕಾರ ಅಪ್ರಾಪ್ತ ಬಾಲಕಿಯು ಚಾಲಕನ ಕೈಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಚಲಿಸುತ್ತಿದ್ದ ವಾಹನದಿಂದ ಹಾರಿ ತನಗೆ ತಾನೇ ಅಪಾಯ ತಂದುಕೊಂಡಿದ್ದಾಳೆ. ಅವಳು ಆರೀತಿ ಹಾರದಿದ್ದರೆ ಆಟೋ ಚಾಲಕನಿಂದ ಅಪಾಯ ಎದುರಾಗುತ್ತಿತ್ತು.
ಜನನಿಬಿಡ ಮುಖ್ಯ ರಸ್ತೆಯಲ್ಲಿ ಹಾರಿದನಂತರ ಹುಡುಗಿಯ ತಲೆಗೆ ಗಂಭೀರ ಗಾಯವಾಗಿದೆ. ಆರೋಪಿ ಆಟೋ ಚಾಲಕನನ್ನು ಸೈಯದ್ ಅಕ್ಬರ್ ಹಮೀದ್ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ.
ಚಾಲಕನ ಅಶ್ಲೀಲ ವರ್ತನೆಗಳು ಮತ್ತು ಅಶ್ಲೀಲ ಮಾತುಗಳನ್ನು ಗ್ರಹಿಸಿದ ನಂತರ ಹುಡುಗಿ ಬೇರೆ ದಾರಿ ಕಾಣದೆ ವೇಗವಾಗಿ ವಾಹನದಿಂದ ಜಿಗಿದಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಹುಡುಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ,
