ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಆಯೋಜಿಸಿರುವ ಫಣಿಗಿರಿ ಪ್ರತಿಷ್ಠಾನ ಶಿರೂರು ಇವರ ‘ಶಿರೂರು ಫಣಿಯಪ್ಪಯ್ಯ ಸಂಸ್ಮರಣ’ ಕಾರ್ಯಕ್ರಮ ದಿನಾಂಕ 20.11.2022ರ ಆದಿತ್ಯವಾರದಂದು ‘ಗೊಂಬೆ ಮನೆ’ ಉಪ್ಪಿನಕುದ್ರು ಇಲ್ಲಿ ನಡೆಯಲಿದೆ.


ಈ ಬಾರಿಯ ಫಣಿಗಿರಿ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕವಿ ಕಂದಾವರ ಶ್ರೀ ರಘುರಾಮ ಶೆಟ್ಟಿಯವರಿಗೆ ನೀಡಲಾಗುವುದು ಎಂದು ಫಣಿಗಿರಿ ಪ್ರತಿಷ್ಠಾನ ಶಿರೂರು ಪ್ರಕಟಿಸಿದೆ.
ಈ ಸಂದರ್ಭದಲ್ಲಿ ಫಣಿಯಪ್ಪಯ್ಯ ವಿರಚಿತ ಪ್ರಸಂಗ ಸಂಪುಟವೂ ಬಿಡುಗಡೆಯಾಗಲಿದೆ. ಶಿರೂರು ಫಣಿಯಪ್ಪಯ್ಯ ಸಂಗ್ರಹಿತ ತಾಳೆಗರಿ ಹಸ್ತಪ್ರತಿ ಪ್ರದರ್ಶನ ಮತ್ತು ಪುಸ್ತಕ ಪ್ರದರ್ಶನವೂ ನಡೆಯಲಿದೆ.
ಬಳಿಕ ಹೆರಂಜಾಲು ಗೋಪಾಲ ಗಾಣಿಗ ಮತ್ತು ಸಂಗಡಿಗರಿಂದ ಯಕ್ಷಗಾನ ಗಾನ ವೈಭವ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಚಿತ್ರ ನೋಡಿ.
