ಹಿರಿಯ ಮದ್ದಳೆಗಾರ ಶ್ರೀ ಪೆರುವಾಯಿ ನಾರಾಯಣ ಭಟ್ ಅವರಿಗೆ ‘ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ’

ಯಕ್ಷಗಾನದ ಗುರು ದಂಪತಿ ಖ್ಯಾತ ಮದ್ದಳೆಗಾರ ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಖ್ಯಾತ ಭಾಗವತರಾದ ಲೀಲಾವತಿ ಬೈಪಾಡಿತ್ತಾಯರ ಹೆಸರಿನಲ್ಲಿ ಡಿಜಿ ಯಕ್ಷ ಫೌಂಡೇಶನ್ (ರಿ) ಬೆಂಗಳೂರು ಮೂಲಕ ಕೊಡಮಾಡುವ ಶ್ರೀಹರಿಲೀಲಾ ಯಕ್ಷನಾದ 2ನೇ ವರ್ಷದ ಪ್ರಶಸ್ತಿಯನ್ನು ಹಿರಿಯ ಮದ್ದಳೆಗಾರ ಶ್ರೀ ಪೆರುವಾಯಿ ನಾರಾಯಣ ಭಟ್ ಅವರಿಗೆ ನೀಡಿ ಗೌರವಿಸಲಾಯಿತು.
ಮೊನ್ನೆ ಶನಿವಾರ (ನ.12) ಮೂಡುಬಿದಿರೆಯ ಆಲಂಗಾರು ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯಕ್ಷಗಾನ ವಿದ್ವಾಂಸ, ವಿಮರ್ಶಕ, ಅರ್ಥಧಾರಿ ಡಾ.ಮಾಳ ಪ್ರಭಾಕರ ಜೋಶಿ,
ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಲೀಲಾವತಿ ಬೈಪಾಡಿತ್ತಾಯ, ಮದ್ದಳೆಗಾರ ಕೃಷ್ಣಪ್ರಕಾಶ ಉಳಿತ್ತಾಯ, ಆರತಿ ಪಟ್ರಮೆ, ಡಾ. ಸಿಬಂತಿ ಪದ್ಮನಾಭ, ಬೈಪಾಡಿತ್ತಾಯ ಗುರುಗಳ ಶಿಷ್ಯರಾದ ಚಂದ್ರಶೇಖರ ಕೊಂಕಣಾಜೆ, ಗಿರೀಶ್ ಕಿನಿಲಕೋಡಿ, ಆನಂದ ಗುಡಿಗಾರ, ಡಿಜಿ ಯಕ್ಷ ಫೌಂಡೇಶನ್ ನಿರ್ದೇಶಕ ಅವಿನಾಶ್ ಬೈಪಾಡಿತ್ತಾಯ ಇದ್ದಾರೆ.
