Saturday, January 18, 2025
Homeಯಕ್ಷಗಾನ"ಸಾಮಾಜಿಕ ಜಾಲತಾಣಗಳು ಕಲೆಗೆ ಶಕ್ತಿಯನ್ನು ತುಂಬಿದೆ" - ಶಾಸಕ ಹರೀಶ್ ಪೂಂಜ

“ಸಾಮಾಜಿಕ ಜಾಲತಾಣಗಳು ಕಲೆಗೆ ಶಕ್ತಿಯನ್ನು ತುಂಬಿದೆ” – ಶಾಸಕ ಹರೀಶ್ ಪೂಂಜ

ಯಕ್ಷಗಾನವು ಅನಾದಿಕಾಲದಿಂದಲೂ ಮನೋರಂಜನೆ ಮತ್ತು ಶಿಕ್ಷಣವನ್ನು ನೀಡುವ ಕಲಾಪ್ರಕಾರವಾಗಿ ಬೆಳೆದು ಬಂದಿದೆ. ಇಂದು ಸಾಮಾಜಿಕ ಜಾಲತಾಣಗಳ ಮೂಲಕ ಯಕ್ಷಗಾನ ಪ್ರದರ್ಶನಗಳ ವೀಕ್ಷಣೆಯ ಸಂಖ್ಯೆಯು ಹೆಚ್ಚಾಗಿದೆ. ಆದರೆ ಕಲಾಪ್ರದರ್ಶನಗಳ ಮೌಲ್ಯವು ಹೆಚ್ಚಾಗಿ  ಪರಿಣಾಮಕಾರಿಯಾಗ ಬೇಕಾದರೆ ಕಲಾವಿದರ ಮತ್ತು ಪ್ರೇಕ್ಷಕರ ನೇರ ಸಂವಹನ ಅಗತ್ಯವಿದೆ. ಈ ನಿಟ್ಟಿನಲ್ಲಿ ಐದು ದಿನಗಳ ತಾಳಮದ್ದಳೆ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶದಲ್ಲಿ ನಡೆಸುವ ಮೂಲಕ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಯಕ್ಷಗಾನ ಸಂಘವು ಉತ್ತಮವಾದ ಕಾರ್ಯ ನಡೆಸುತ್ತಿದ್ದು ಸರ್ವರೂ ಸಹಕಾರ ನೀಡಬೇಕೆಂದು ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜ ತಿಳಿಸಿದರು.     

 ಶ್ರೀಪಂಚ  ದುರ್ಗಾಪರಮೇಶ್ವರಿ ದೇವಸ್ಥಾನ ಕೊಯ್ಯೂರು ಆಶ್ರಯದಲ್ಲಿ ಶ್ರೀ ಪಂಚದುರ್ಗಾ ಭಜನ ಮಂಡಳಿ ಸಹಯೋಗದಲ್ಲಿ ಶ್ರೀ ಪಂಚದುರ್ಗಾ ಯಕ್ಷಗಾನ ಕಲಾಸಂಘ ನೇತೃತ್ವದಲ್ಲಿ  ಜರಗುತ್ತಿರುವ ತಾಳಮದ್ದಳೆ ಪಂಚಾಹ 2022 ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ದೇವಳದ ಆಡಳಿತ ಮೋಕ್ತೆಸರರಾದ ಕೆ.ಬಿ. ಹರಿಶ್ಚಂದ್ರ ಬಳ್ಳಾಲ್ ವಹಿಸಿದ್ದರು.

ಸಂಸ್ಮರಣೆ:  ದೇವಳದ ಪ್ರಧಾನ ಅರ್ಚಕರಾಗಿ ಮತ್ತು ಯಕ್ಷಗಾನ ಕಲಾವಿದರಾಗಿ ಜನಪ್ರಿಯ ರಾಗಿದ್ದ ಕೀರ್ತಿಶೇಷ ಕುಂಠಿನಿ ಕೃಷ್ಣ ಭಾಂಗಿಣ್ಣಾಯ ಅಗ್ರಸಾಲೆ ಇವರ ಸಂಸ್ಮರಣೆಯನ್ನು ಶಿಕ್ಷಕರಾದ ರಾಮಕೃಷ್ಣ ಭಟ್ ನಿನ್ನಿಕಲ್ಲು ಮಾಡಿದರು. ಸಂಸ್ಮರಣೆಯ ಅಂಗವಾಗಿ  ಕೃಷ್ಣ ಭಾಂಗಿಣ್ಣಾಯರ ಸುಪುತ್ರ ಅಶೋಕ ಕುಮಾರ್ ಭಾಂಗಿಣ್ಣಾಯರನ್ನು ಶಾಸಕ ಹರೀಶ್ ಪೂಂಜ ಮತ್ತು ಹರಿಶ್ಚಂದ್ರ ಬಲ್ಲಾಳ್ ಗೌರವಿಸಿದರು.

ತಾಳಮದ್ದಳೆ ಸಂಘಟಕರ ಪರವಾಗಿ ಸಂಘದ ಅಧ್ಯಕ್ಷರಾದ ಉಮೇಶ್ ಆಚಾರ್ಯ ಕೋಡಿಯೆಲ್, ಬಾಸಮೆ ನಾರಾಯಣ ಭಟ್ ಮಾನ್ಯ ಶಾಸಕರನ್ನು ಗೌರವಿಸಿದರು.

ವೇದಿಕೆಯಲ್ಲಿ  ಯಕ್ಷ ಭಾರತಿ ಬೆಳ್ತಂಗಡಿ (ರಿ) ಸಂಸ್ಥೆಯ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಮಲೆಬೆಟ್ಟು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್, ಕೊಯ್ಯುರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೃಷ್ಣ ಭಟ್, ಕೊಯ್ಯೂರು ಪೆಡರಲ್ ಬ್ಯಾಂಕಿನ  ಸುಮಂತ್, ಸುಧಾಂಶು ಗೇರುಕಟ್ಟೆ ಉಪಸ್ಥಿತರಿದ್ದರು.

ದೇವಳದ ಪ್ರಧಾನ ಅರ್ಚಕರಾದ ಅಶೋಕ್ ಕುಮಾರ್ ಭಾಂಗಿಣ್ಣಾಯ ಸ್ವಾಗತಿಸಿ ಶಿಕ್ಷಕ ವಿಜಯಕುಮಾರ್.ಎಂ ಕೊಯ್ಯೂರು ಧನ್ಯವಾದ ಅರ್ಪಿಸಿದರು. ಉಪನ್ಯಾಸಕಿ ಕೆ.ಆರ್ ಸುವರ್ಣ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಉತ್ತರನ ಪೌರುಷ ತಾಳಮದ್ದಳೆ ಜರುಗಿತು. ಭಾಗವತರಾಗಿ ಚಿನ್ಮಯ ಭಟ್ ಕಲ್ಲಡ್ಕ ಹಿಮ್ಮೇಳದಲ್ಲಿ ಜನಾರ್ದನ ತೋಳ್ಪಾಡಿತ್ತಾಯ,  ರಾಮಪ್ರಕಾಶ್ ಕಲ್ಲೂರಾಯ, ಶ್ರೇಯಸ್ ಪಾಳಂದೆ ಅರ್ಥಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಮಧೂರು ಮೋಹನ ಕಲ್ಲೂರಾಯ, ರಾಮಜೋಯಿಸ್ ಬೆಳ್ಳಾರೆ, ರಾಮಕೃಷ್ಣ ಭಟ್ ನಿನ್ನಿಕಲ್ಲು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments