Saturday, January 18, 2025
Homeಸುದ್ದಿಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ- ಸಂಸ್ಮರಣೆ ಮತ್ತು ಗೇರುಕಟ್ಟೆ ಉಮೇಶ ಆಚಾರ್ಯರಿಗೆ ಸನ್ಮಾನ 

ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ- ಸಂಸ್ಮರಣೆ ಮತ್ತು ಗೇರುಕಟ್ಟೆ ಉಮೇಶ ಆಚಾರ್ಯರಿಗೆ ಸನ್ಮಾನ 

ಯಕ್ಷಗಾನ ರಸಋಷಿ ಅರ್ಕುಳ ಸುಬ್ರಾಯ ಆಚಾರ್ಯರಿಂದ ಉದ್ಘಾಟಿಸಲ್ಪಟ್ಟ ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಆಚರಣೆಯ ಪ್ರಯುಕ್ತ 34ನೇ  ಸರಣಿ ಕಾರ್ಯಕ್ರಮ ಮಂಗಳೂರು ಕುಡ್ತೆರಿ ಶ್ರೀ ಮಹಾಮಾಯ ದೇವಸ್ಥಾನದಲ್ಲಿ ಜರಗಿತು.

ಸನ್ಮಾನ: ಈ ಸಂದರ್ಭದಲ್ಲಿ ಸಂಘದಲ್ಲಿ ಅರ್ಥಧಾರಿಯಾಗಿ ಭಾಗವಹಿಸುತ್ತಿದ್ದ ಉಮೇಶ ಆಚಾರ್ಯ ಗೇರುಕಟ್ಟೆ ಇವರನ್ನು ವೆಂಕಟರಮಣ ದೇವಸ್ಥಾನದ ಆಡಳಿತ ಮುಕ್ತೇಸರ ಎ. ಬಾಲಕೃಷ್ಣ ಶೆಣೈ ಸನ್ಮಾನಿಸಿದರು.

ಉಮೇಶ ಆಚಾರ್ಯರು ದಕ್ಷ ಸರಕಾರಿ ನೌಕರರಾಗಿ, ಹವ್ಯಾಸಿ ಯಕ್ಷಗಾನ ಅರ್ಥಧಾರಿಯಾಗಿ ವಿವಿಧ ಆಯಾಮಗಳಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬಗ್ಗೆ  ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್ ರಾವ್ ಅಭಿನಂದನಾ ಮಾತುಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಉಮೇಶ ಆಚಾರ್ಯರು ಈ ಸಂಘದಲ್ಲಿ ಹಲವು ಹಿರಿಯ ಕಲಾವಿದರೊಂದಿಗೆ ಭಾಗವಹಿಸಿದ ನೆನಪುಗಳನ್ನು ಸ್ಮರಿಸಿ ನೂರು ವರ್ಷಗಳ ಇತಿಹಾಸ ಇರುವ ಯಕ್ಷಗಾನ ಸಂಘದ ಗೌರವ ಸ್ಮರಣೀಯವೆಂದು ತಿಳಿಸಿದರು.

ಸಂಘಟನಾ ಕಾರ್ಯದರ್ಶಿ ಅಶೋಕ ಬೋಳೂರು ಅಭಿನಂದನಾ ಪತ್ರ ವಾಚಿಸಿದರು.

ಸಂಸ್ಮರಣೆ: ವಾಗೀಶ್ವರಿ ಸಂಘದ ತಾಳಮದ್ದಲೆಯಲ್ಲಿ ಹಿಮ್ಮೇಳವಾದಕರಾಗಿ ಭಾಗವಹಿಸುತ್ತಿದ್ದ ಕೀರ್ತಿ ಶೇಷ ಸದಾನಂದ ಪ್ರಭು ಅವರ ಸಂಸ್ಮರಣೆ ಮಾಡಲಾಯಿತು.

ಸ್ವರ್ಣೋದ್ಯಮಿ ಗುರುಪ್ರಸಾದ್ ಶೇಟ್, ಲೆಕ್ಕಪರಿಶೋಧಕ ಚೇತನ ಕಾಮತ್ ಕದ್ರಿ ಮುಖ್ಯ ಅತಿಥಿಗಳಾಗಿದ್ದರು.

ಸಂಘದ ಅಧ್ಯಕ್ಷ ಶ್ರೀನಾಥ ಪ್ರಭು, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಸಿ.ಎಸ್ ಭಂಡಾರಿ, ಉಪಾಧ್ಯಕ್ಷ ಪ್ರಫುಲ್ಲನಾಯಕ್, ವಿಶ್ವ ಬ್ರಾಹ್ಮಣ ಮಹಿಳಾ ಯಕ್ಷಗಾನ ಮಂಡಳಿಯ ವನಿತಾ ಉಪೇಂದ್ರ ಆಚಾರ್ಯ, ಗುಣರತ್ನ ಉಮೇಶ ಆಚಾರ್ಯ, ಸುಮಂತ್ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಖಜಾಂಜಿ ಶಿವಪ್ರಸಾದ್ ಪ್ರಭು ಸ್ವಾಗತಿಸಿದರು.

ಶ್ರೀ ರಾಮಚರಿತಾಮೃತ ಸರಣಿಯಲ್ಲಿ ಮಂಗಳೂರು ರಥಬೀದಿಯ ವಿಶ್ವಬ್ರಾಹ್ಮಣ ಮಹಿಳಾ ಯಕ್ಷಗಾನ ಮಂಡಳಿಯ ಸದಸ್ಯರಿಂದ “ಇಂದ್ರಜಿತು ಕಾಳಗ” ತಾಳಮದ್ದಳೆ ಜರಗಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments