ಒಂದು ಅಕ್ಕಿಯ ಕಾಳಿನ ಗಾತ್ರದಲ್ಲಿ ಕಾಂತಾರ ಸಿನಿಮಾದ ದೈವದ ಚಿತ್ರ ಬಿಡಿಸಿದ ಸೂಕ್ಷ್ಮ ಚಿತ್ರ ಕಲಾವಿದ ವೆಂಕಟೇಶ್ ಆಚಾರ್ಯ
ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದ ಸೂಕ್ಷ್ಮ ಚಿತ್ರ ಕಲಾವಿದ ವೆಂಕಟೇಶ್ ಆಚಾರ್ಯ ಅವರು ಒಂದು ಅಕ್ಕಿಯ ಕಾಳಿನ ಗಾತ್ರದಲ್ಲಿ ಕಾಂತಾರ ಸಿನಿಮಾದ ದೈವದ ಚಿತ್ರ ಬಿಡಿಸಿದ್ದಾರೆ. ಇದನ್ನು ನಿಮಗೆ ಓದಿದಾಗ ಆಶ್ಚರ್ಯವಾಗಬಹುದು. ಆದರೆ ಇದು ನಿಜ.
ವೆಂಕಟೇಶ್ ಆಚಾರ್ಯರದ್ದು ಇದೊಂದೇ ಸಾಧನೆ ಅಲ್ಲ. ಇಂತಹಾ ಹಲವಾರು ಸಾಧನೆಗಳನ್ನು ಅವರು ಮಾಡಿದ್ದಾರೆ. ಮೇಲಿನ ಚಿತ್ರವನ್ನು ನೋಡಿ ಅದರಲ್ಲಿ ಅಕ್ಕಿಯ ಕಾಳಿನ ಗಾತ್ರದ ಪಕ್ಕದಲ್ಲಿ ಅವರು ಬಿಡಿಸಿದ ಕಾಂತಾರ ದೈವದ ಸಿನಿಮಾದ ಚಿತ್ರವೂ ಕಾಣಬಹುದು.
ಇವರು 1990ರಲ್ಲಿ 90 ಮಿಲಿಗ್ರಾಮ್ (0.090 gram) ಚಿನ್ನದಲ್ಲಿ ಕ್ರಿಕೆಟ್ ನ ವಿಶ್ವಕಪ್ ಪ್ರತಿರೂಪವನ್ನು ಸೃಷ್ಟಿಸಿದ್ದರು. ಸುಬ್ರಾಯ ಆಚಾರ್ಯ ಮತ್ತು ಶಾರದಾ ದಂಪತಿಯ ಪುತ್ರರಾಗಿರುವ ವೆಂಕಟೇಶ್ ಆಚಾರ್ಯ ಅವರು ‘ಪುಟ್ಟ ಇಚ್ಲಂಗೋಡು’ ಎಂಬ ಹೆಸರಿನಿಂದ ಊರಿನಲ್ಲಿ ಪ್ರಸಿದ್ಧರು.
ಇವರು ಒಂದು ಅಕ್ಕಿಕಾಳಿನ ಗಾತ್ರದಲ್ಲಿ 0.010 ಮಿಲಿಗ್ರಾಮ್ ಚಿನ್ನದಲ್ಲಿ ಸ್ವಚ್ಛ್ ಭಾರತ್ ಲಾಂಛನವನ್ನು ನಿರ್ಮಿಸಿ ದಾಖಲೆ ಮಾಡಿದ್ದಾರೆ. ವೃತ್ತಿಯಲ್ಲಿ ಚಿನ್ನದ ಕೆಲಸಗಾರರಾಗಿರುವ ಇವರು ತನ್ನ ದಿನನಿತ್ಯದ ಬಿಡುವಿಲ್ಲದ ಕೆಲಸಗಳ ನಡುವೆಯೂ ಇಂತಹಾ ಕಲೆಗೋಸ್ಕರ ಸ್ವಲ್ಪ ಸಮಯವನ್ನು ಮೀಸಲಾಗಿಡುತ್ತಾರೆ.
ಇವರ ಈವರೆಗಿನ ಸಾಧನೆಗಳಲ್ಲಿ ಪೆನ್ಸಿಲ್ ಲೆಡ್ ನಿಂದ ಮಾಡಿದ ಯೋಗಾಸನದ ಭಂಗಿ, ದೀಪಾವಳಿಯ ಲ್ಯಾಂಪ್, ವಿಶ್ವಕಪ್, ಅಂಚೆಕಾರ್ಡ್ ನಲ್ಲಿ ಓಂ ನಮಃ ಶಿವಾಯ ಎಂದು 6524 ಬಾರಿ ಬರೆದದ್ದು, ವಿವೇಕಾನಂದ ಎಂದು 150 ಬಾರಿ ಬರೆದು ವಿವೇಕಾನಂದರ ಚಿತ್ರರಚನೆ ಮೊದಲಾದ ಇನ್ನೂ ಹಲವಾರು ಸಾಧನೆಗಳನ್ನು ಮಾಡಿದ್ದಾರೆ.
ವೆಂಕಟೇಶ್ ಆಚಾರ್ಯರಿಗೆ ಆಲ್ ದ ಬೆಸ್ಟ್ ಹೇಳೋಣ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions