2022 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೃತ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನೃತ್ಯ ಗುರು ಪಿ. ಕಮಲಾಕ್ಷ ಆಚಾರ್ ಅವರಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರಗಿದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಸನ್ಮಾನ್ಯಮುಖ್ಯ ಮಂತ್ರಿಗಳಾದ ಬಸವರಾಜ ಎಸ್.ಬೊಮ್ಮಾಯಿ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಸರ್ಕಾರದ ಕಾರ್ಯದರ್ಶಿ ಡಾ.ಎನ್.ಮಂಜುಳಾ ಸಂಸದರಾದ ಎಲ್.ಎಸ್.ತೇಜಸ್ವಿ ಸೂರ್ಯ, ಶಾಸಕರಾದ ಉದಯ ಬಿ.ಗರುಡಾಚಾರ್, ಕಂದಾಯ ಸಚಿವ ಆರ್. ಅಶೋಕ್ ಅವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದು ಆಚಾರ್ಯರನ್ನು ಗೌರವಿಸಿದರು.
ಮಂಗಳೂರಿನ ನಾಟ್ಯಾಚಾರ್ಯ ಯು .ಎಸ್ .ಕೃಷ್ಣರಾವ್ ಇವರಿಂದ ಆರಂಭಿಕ ನೃತ್ಯ ಅಭ್ಯಾಸ .1977ರಲ್ಲಿ ಬೆಂಗಳೂರಿನ ಸನಾತನ ಕಲಾಕ್ಷೇತ್ರದಲ್ಲಿ ಭರತನಾಟ್ಯ ಡಿಪ್ಲೋಮೋ ಪಡೆದ ಇವರು ಅಭಿನಯ ಶಿರೋಮಣಿ ರಾಜರತ್ನಂ ಪಿಲ್ಲೈ, ಬೆಂಗಳೂರಿನ ಶ್ರೀಮತಿ ನರ್ಮದಾ ಮತ್ತು ಶ್ರೀಮತಿ ಭಾನುಮತಿ ಇವರಿಂದಲೂ ಭರತನಾಟ್ಯದ ವಿಶೇಷ ತರಬೇತಿಯನ್ನು ಪಡೆದಿದ್ದಾರೆ. ಭರತನಾಟ್ಯಕ್ಕೆ ಪೂರಕವಾಗಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ್ದಾರೆ.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ 2021ರ ಕರ್ನಾಟಕ ಕಲಾ ಶ್ರೀ ಪ್ರಶಸ್ತಿಯನ್ನು ಪಡೆದಿರುವ ಇವರು ಕರಾವಳಿಯ ನೃತ್ಯಕಲಾ ಪರಿಷತ್ತಿನ ಅಧ್ಯಕ್ಷರಾಗಿ 12 ವರ್ಷಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ದ.ಕ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ನೃತ್ಯ ಕಲಾವಾರಿಧಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಕಮಲಾಕ್ಷಾಚಾರ್ಯರು 1976ರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ನೃತ್ಯ ನಿಕೇತನ ಸಂಸ್ಥೆಯನ್ನು ಆರಂಭಿಸಿ ನಾಟ್ಯ ಗುರುವಾಗಿ ನೂರಾರು ಶಿಷ್ಯಂದಿರಿಗೆ ಭರತನಾಟ್ಯವನ್ನು ಅಭ್ಯಾಸ ಮಾಡಿಸಿದ್ದಾರೆ . ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಪುತ್ರಿ ಶ್ರದ್ದಾ ಅಮಿತ್ ಇವರಿಗೂ ಭರತನಾಟ್ಯದ ಗುರುವಾಗಿದ್ದಾರೆ. ಇವರ ಶಿಷ್ಯಯಾದ ಶ್ರೀಮತಿ ಕೃಪಾಪಡ್ಕೆ ಮೈಸೂರುನಲ್ಲಿ ನೃತ್ಯಗಿರಿ ಸಂಸ್ಥೆ ಸ್ಥಾಪಿಸಿ ಭರತನಾಟ್ಯ ಅಭ್ಯಾಸ ಮಾಡಿಸುತಿದ್ದು ಸ್ವತಃ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿ ಖ್ಯಾತರಾಗಿದ್ದಾರೆ.
ಮಡದಿ ಪುಷ್ಪಲತಾ ಪುತ್ರಿಯರಾದ ಶಾಂತಲಾ ಮತ್ತು ವರ್ಷಿಣಿ ಇವರನ್ನು ಭರತನಾಟ್ಯ ಕಲಾವಿದರಾಗಿ ಮತ್ತು ಗುರುಗಳಾಗಿ ರೂಪಿಸಿದ ಕಲಾಪ್ರೇಮಿ ಕಮಲಾಕ್ಷಾಚಾರ್ ಬೆಳ್ತಂಗಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ನಾಲ್ಕೈದು ದಶಕಗಳ ಮೊದಲೇ ಭರತನಾಟ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ ಅರ್ಹವಾಗಿಯೇ ಸಂದಿದೆ.
ನಾನು ರಂಗದಲ್ಲಿ ಪ್ರದರ್ಶನ ಮಾಡಿರುವುದು ಕಡಿಮೆ. ಆದರೆ ನನ್ನ ಶಿಷ್ಯಂದಿರ ಸಾಧನೆಯೆ ನನ್ನನ್ನು ಈ ಕ್ಷೇತ್ರದಲ್ಲಿ ಎತ್ತರಕ್ಕೆ ಏರಿಸಿದೆಯೆಂಬ ಇವರ ಮಾತುಗಳು ಗುರುತನಕ್ಕೆ ಗೌರವ ತಂದಿದೆ.
ಬರಹ: ದಿವಾಕರ ಆಚಾರ್ಯ ,ಗೇರುಕಟ್ಟೆ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions