ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ ಇವರು ಇಂದು 08.11.2022 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಸಂಜೆ ಗಂಟೆ 7ರಿಂದ 12 ರ ತನಕ ತ್ರಿಪುರ ಮಥನ ಎಂಬ ಸೇವೆ ಬಯಲಾಟ ಜರುಗಲಿದೆ.
ಶ್ರೀ ಮಂಜುನಾಥ ಗಣಪತಿ ನಾವಡ, ಪ್ರಿಯದರ್ಶಿನಿ, ಶ್ರೀ ಕೃಷ್ಣ ರೆಸಿಡೆನ್ಸಿ, ಚಾಂತಾರು, ಬ್ರಹ್ಮಾವರ ಇವರ ಸೇವೆಯಾಟ ಇಂದು ನಡೆಯಲಿರುವುದು.
ಈ ಯಕ್ಷಗಾನ ಪ್ರದರ್ಶನ ಶ್ರೀ ಕ್ಷೇತ್ರದ ಯೂಟ್ಯೂಬ್ ಚಾನೆಲಿನಲ್ಲಿ ನೇರಪ್ರಸಾರಗೊಳ್ಳಲಿದೆ.

