ಪುಣೆಯಲ್ಲಿ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರ ಷಷ್ಟ್ಯಬ್ದ ಸಂಭ್ರಮ – ಸಾಧಕರಿಗೆ ಗುರುಗಳಿಂದ ಆಶೀರ್ವಾದ, ಸನ್ಮಾನ

ನಿನ್ನೆ ತಾರೀಖು 06/11/2022 ಆದಿತ್ಯ ವಾರ ಪುಣೆಯ ಬಂಟರ ಸಂಘ ಸಭಾಭವನದಲ್ಲಿ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರ ಷಷ್ಟ್ಯಬ್ದ ಸಂಭ್ರಮ, ಗುರುದೇವ ಸೇವಾಬಳಗ ಮತ್ತು ವಜ್ರಮಾತಾ ಬಳಗದವರ ಹತ್ತೊಂಬತ್ತನೇ ವಾರ್ಷಿಕೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು.
ಆ ಸಂದರ್ಭದಲ್ಲಿ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರ ಅರುವತ್ತರ ಹುಟ್ಟು ಹಬ್ಬದ ನಿಮಿತ್ತ,
ಪುಣೆಯಲ್ಲಿ ಇರುವ ಗುರುಸೇವೆ ಮತ್ತು ಇತರ ಸಾಮಾಜಿಕ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಜನರನ್ನು ಹುಡುಕಿ ಶ್ರೀ ಗುರುಗಳ ಕೈಯಿಂದ ಹತ್ತು ಸಮಸ್ತರ ಮುಂದೆ ಸತ್ಕರಿಸಲಾಯಿತು.
