ಪುತ್ತೂರಿನ ನವವಿವಾಹಿತೆಯೋರ್ವರು ಪುತ್ತೂರಿನಲ್ಲಿರುವ ತನ್ನ ಪತಿಯ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 26 ವರ್ಷದ ವೈಶಾಲಿ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಯುವತಿ.

ಪುತ್ತೂರು ತಾಲ್ಲೂಕಿನ ಮಾಡನ್ನೂರು ಗ್ರಾಮದ ಸಾಂತ್ಯ ಎಂಬಲ್ಲಿರುವ ಈಕೆ ಕಳೆದ ಏಳು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ.
ಈಕೆ ತನ್ನ ಪತಿಯ ಮನೆಯಲ್ಲಿರುವಾಗಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡದ್ದಾರೆ ಎಂದು ತಿಳಿದುಬಂದಿದೆ. ಇವರು ಸಾಂತ್ಯ ನಿವಾಸಿ ಜಯಪ್ರಕಾಶ್ ಅವರ ಪತ್ನಿ.
ಜಯಪ್ರಕಾಶ್ ಅವರ ಜತೆ 7ತಿಂಗಳ ಹಿಂದೆ ವೈಶಾಲಿ ಅವರ ವಿವಾಹ ನೆರವೇರಿತ್ತು. ವೈಶಾಲಿ ಅವರು ಶನಿವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಬಗ್ಗೆ ಮೃತಳ ತಾಯಿ ಪೊಲೀಸರಿಗೆ ದೂರುನೀಡಿದ್ದು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದು ಆತ್ಮಹತ್ಯೆಗೆ ಕಾರಣ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
