ಪಿಎಸ್‌ಐ ನೇಮಕಾತಿ ಹಗರಣ: ಪರೀಕ್ಷೆಯಲ್ಲಿ 1ನೇ ರಾಂಕ್ ಪಡೆದ ಜೇವರ್ಗಿಯ ಸುಪ್ರಿಯಾ ಅವರನ್ನು ಸಿಐಡಿ ಬಂಧಿಸಿದೆ.

ಕಲಬುರ್ಗಿ: ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ಅಕ್ರಮ ನೇಮಕಾತಿ (ಪಿಎಸ್ ಐ ನೇಮಕಾತಿ ಹಗರಣ) ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ಸ್ಥಾನ ಪಡೆದ ಸುಪ್ರಿಯಾ ಹುಂಡೇಕಾರ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ತಂಡ ಮತ್ತೊಬ್ಬ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದು, ಶೋಧ ನಡೆಸುತ್ತಿದೆ. ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಹಿಪ್ಪರಗಾ ಗ್ರಾಮದ ನಿವಾಸಿ ಸುಪ್ರಿಯಾ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದ ಆರೋಪ ಎದುರಿಸುತ್ತಿದ್ದಾರೆ.
ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಪ್ರಥಮ ರಾಂಕ್ ಪಡೆದಿದ್ದಾರೆ. ಸುಪ್ರಿಯಾ ಅವರ ವಿಚಾರಣೆ ಬಳಿಕ ಅಕ್ರಮವಾಗಿ ಪರೀಕ್ಷೆ ಬರೆದವರ ಮಾಹಿತಿ ಲಭ್ಯವಾಗಲಿದೆ ಎಂದು ಸಿಐಡಿ ಅಧಿಕಾರಿಗಳು ನಿರೀಕ್ಷಿಸುತ್ತಿದ್ದಾರೆ.
ಕಲಬುರ್ಗಿಯ ಸರ್ಕಾರಿ ಪದವಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಸುಪ್ರಿಯಾ ಪರೀಕ್ಷೆ ಬರೆದಿದ್ದರು. ಪ್ರಥಮ Rank ಪಡೆದ ಸುಪ್ರಿಯಾ 1ನೇ ಪತ್ರಿಕೆಯಲ್ಲಿ 50ಕ್ಕೆ 24 ಹಾಗೂ 2ನೇ ಪತ್ರಿಕೆಯಲ್ಲಿ 150ಕ್ಕೆ 131.25 ಅಂಕ ಪಡೆದಿದ್ದಾರೆ.
ಸುಪ್ರಿಯಾ ಎರಡೂ ಪತ್ರಿಕೆಗಳಲ್ಲಿ 155.25 ಅಂಕ ಪಡೆದು ಹುದ್ದೆಗೆ ಆಯ್ಕೆಯಾದರು. ಕಲಬುರ್ಗಿ, ಬೆಂಗಳೂರು ಮತ್ತಿತರ ನಗರಗಳಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ನೂರಕ್ಕೂ ಹೆಚ್ಚು ಜನರನ್ನು ಸಿಐಡಿ ಬಂಧಿಸಿದೆ.
