ತುಮಕೂರು ಡಿವೈಎಸ್ಪಿ ಪಿ ಶ್ರೀನಿವಾಸ್ ಅವರು ಇಂದು ಪಿಎಸ್ಐ (ಪೊಲೀಸ್ ಸಬ್-ಇನ್ಸ್ಪೆಕ್ಟರ್) ನೇಮಕಾತಿ ಹಗರಣದ ಸಂತ್ರಸ್ತರಿಗೆ ಕಪಾಳಮೋಕ್ಷ ಮಾಡಿ ಕಳುಹಿಸಿದ್ದಾರೆ.

ಸಂತ್ರಸ್ತರು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಹಗರಣದಿಂದ ತಾವು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಮಾತನಾಡಲು ಬಂದಿದ್ದರು.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಶ್ರೀನಿವಾಸ್ ಸಂತ್ರಸ್ತರಿಗೆ ಕಪಾಳಮೋಕ್ಷ ಮಾಡಿ ಕಳುಹಿಸುತ್ತಿರುವುದನ್ನು ಕಾಣಬಹುದು.
ವರದಿಗಳ ಪ್ರಕಾರ, ಸಂತ್ರಸ್ತರು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಹಗರಣದಿಂದ ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಮಾತನಾಡಲು ಬಂದಿದ್ದರು. ಆಗ ಅವರಲ್ಲೊಬ್ಬ ಸ್ವಲ್ಪ ಉದ್ಧಟತನದಿಂದ ವರ್ತಿಸಿದಂತೆ ಮೇಲ್ನೋಟಕ್ಕೆ ಕಾಣಿಸುತ್ತಿತ್ತು.

ಇದು ಶ್ರೀನಿವಾಸ್ ಅವರನ್ನು ಕೆರಳಿಸಿತು. ಇದರಿಂದ ಕೋಪಗೊಂಡ ಅವರು ಅವರಲ್ಲೋರ್ವನಿಗೆ ಕಪಾಳಮೋಕ್ಷ ಮಾಡಿ ಕಳುಹಿಸುವುದನ್ನು ಕಾಣಬಹುದು.