ಕುರಿಯಾಜೆಯಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ತಾಳಮದ್ದಳೆ “ಬ್ರಹ್ಮತೇಜೋಬಲಂಬಲಂ” ಮತ್ತು “ಯತಿಪೂಜೆ”

ಬೆಳ್ಳಾರೆ ಸಮೀಪದ ಕುರಿಯಾಜೆಯಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ “ಬ್ರಹ್ಮತೇಜೋಬಲಂಬಲಂ” ಮತ್ತು “ಯತಿಪೂಜೆ” ಎಂಬ ಪ್ರಸಂಗಗಳ ಯಕ್ಷಗಾನ ತಾಳಮದ್ದಳೆ ಕೂಟ ನಡೆಯಲಿದೆ.
ದಿನಾಂಕ 13.11.2022ರ ಆದಿತ್ಯವಾರ ಬೆಳಗ್ಗೆ 9.30ಘಂಟೆಗೆ ತಾಳಮದ್ದಳೆ ಆರಂಭವಾಗಲಿದೆ.
“ಬ್ರಹ್ಮತೇಜೋಬಲಂಬಲಂ” ಪ್ರಸಂಗದಲ್ಲಿ ಕೌಶಿಕನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತು ವಸಿಷ್ಠನಾಗಿ ಪೆರ್ಮುದೆ ಜಯಪ್ರಕಾಶ ಶೆಟ್ಟಿ ಅರ್ಥ ಹೇಳಲಿದ್ದಾರೆ.
ಕಲಾಭಿಮಾನಿಗಳನ್ನು ಕುರಿಯಾಜೆ ಮನೆಯವರು ಆದರದಿಂದ ಆಮಂತ್ರಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಮತ್ತು ಕಲಾವಿದರ ವಿವರಗಳಿಗೆ ಕಾರ್ಯಕ್ರಮದ ಕರಪತ್ರದ ಚಿತ್ರವನ್ನು ನೋಡಿ.
