ಧರ್ಮಸ್ಥಳ – ಸುಬ್ರಹ್ಮಣ್ಯ ಮಧ್ಯೆ ಬಿಳಿನೆಲೆಯಲ್ಲಿ ಕಾರು ಮತ್ತು ಜೀಪು ಢಿಕ್ಕಿ, ಚಾಲಕರಿಬ್ಬರಿಗೂ ಗಾಯ

ಧರ್ಮಸ್ಥಳ – ಸುಬ್ರಹ್ಮಣ್ಯ ಮಧ್ಯೆ ಬಿಳಿನೆಲೆಯಲ್ಲಿ ಕಾರು ಮತ್ತು ಜೀಪು ಪರಸ್ಪರ ಢಿಕ್ಕಿಯಾಗಿ, ಚಾಲಕರಿಬ್ಬರೂ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಜಿಲ್ಲೆಯ ಎರಡು ಪುಣ್ಯ ತೀರ್ಥಕ್ಷೇತ್ರಗಳನ್ನು ಸಂಪರ್ಕಿಸುವ ರಸ್ತೆಯ ಬಿಳಿನೆಲೆ ಎಂಬಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.
ಇಂದು ಭಾನುವಾರ ಬೆಳಗ್ಗೆ ಈ ಅಪಘಾತ ನಡೆದಿದೆ ಎಂದು ವರದಿಯಾಗಿದೆ. ಜೀಪು ಸುಬ್ರಹ್ಮಣ್ಯ ಕಡೆಯಿಂದ ಕಡಬಕ್ಕೆ ಆಗಮಿಸುತ್ತಿತ್ತು.
ಹುಂಡೈ ಕಾರು ಸುಬ್ರಹ್ಮಣ್ಯಕ್ಕೆ ಹೋಗುತ್ತಿತ್ತು. ಬಿಳಿನೆಲೆ ಸೇತುವೆಯ ಸಮೀಪ ಪರಸ್ಪರ ಢಿಕ್ಕಿ ಸಂಭವಿಸಿದೆ.
ಘಟನೆಯಲ್ಲಿ ಗಾಯಗೊಂಡ ಇಬ್ಬರು ಚಾಲಕರನ್ನೂ ಆಸ್ಪತ್ರೆಗೆ ಸಾಗಿಸಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
