ಅದೊಂದು ಮದುವೆಯ ಸಂಭ್ರಮದ ಸನ್ನಿವೇಶ, ಹುಡುಗಿಯ ಕಡೆಯವರಿಗೆ ಒಳ್ಳೆ ಹುಡುಗ ಸಿಕ್ಕಿದ ಎಂಬ ಸಂತೋಷ. ನಾಳೆಯೇ ಮಾಲ್ಡೀವ್ಸ್ ಗೆ ಹನಿಮೂನಿಗೆ ಟೆಕೆಟ್ ಬೇರೆ ಬುಕ್ ಆಗಿದೆ.
ಆದರೆ ಮದುಮಗ ವಧುವಿಗೆ ತಾಳಿ ಕಟ್ಟಲು ಮುಂದಾಗಿದ್ದ ವೇಳೆಯಲ್ಲಿ ಬಂದ ಫೋನ್ ಕರೆ ಇಡೀ ಮದುವೆ ಮಂಟಪದಲ್ಲಿ ಕೋಲಾಹಲ ಸೃಷ್ಟಿಸಿದ್ದು, ಹುಡುಗಿಯ ಮನೆಯವರಿಗೆ ಸಿಕ್ಕ ಫೋಟೋ ಇಡೀ ಮದುವೆ ಸಂಭ್ರಮದಲ್ಲಿ ಸಿಡಿಲು ಬಡಿದಂತಾಗಿತ್ತು.
ಹಾಸನ: ಹಾಸನದ ಎಂ.ಜಿ.ರಸ್ತೆ ಬಳಿ ಇರೋ ಮದುವೆ ಮಂಟಪದಲ್ಲಿ ಇಂದು (28.102022) ವಿವಾಹ ಮಹೋತ್ಸವ ನೆರವೇರಿತು. ಅದೂ ಅಲ್ಲದೆ ಮರುದಿನ (ಆ.29) ಬೆಳಗ್ಗೆ ಹನಿಮೂನ್ ಗೆ ಮಾಲ್ಡೀವ್ಸ್ ಗೆ ತೆರಳಲು ವಿಮಾನ ಟಿಕೆಟ್ ಕೂಡ ಬುಕ್ ಮಾಡಲಾಗಿತ್ತು. ಆದರೆ ವಧುವಿನ ಅದೃಷ್ಟವೋ ಅಥವಾ ಹುಡುಗಿಯ ಪೋಷಕರ ಪುಣ್ಯವೋ ಏನೋ, ಕೊನೆಯ ಕ್ಷಣದಲ್ಲಿ ಬಂದ ಫೋಟೋವೊಂದು ವರನ ನಿಜವಾದ ಮುಖವಾಡವನ್ನು ಬಯಲು ಮಾಡಿದೆ.
ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮದುವೆಯಾಗಿದ್ದ ಮಧುಸೂದನ್ ಆಕೆಯಿಂದ ಲಕ್ಷಗಟ್ಟಲೆ ವರದಕ್ಷಿಣೆ ಹಾಗೂ ಚಿನ್ನಾಭರಣ ಪಡೆದು ಮತ್ತೊಂದು ಮದುವೆಯಾಗಲು ಸಿದ್ಧನಾಗಿದ್ದ. ಆದರೆ ಮೊದಲ ಹೆಂಡತಿಯ ಪ್ರಯತ್ನದಿಂದ ವಂಚಕನ ವಿನಾಶಕಾರಿ ಯೋಜನೆ ಬಹಿರಂಗವಾಗಿದೆ.
ವರನು ಈಗಾಗಲೇ ವಿವಾಹಿತ ಎಂದು ತಿಳಿದ ತಕ್ಷಣ, ಹುಡುಗಿಯ ಕಡೆಯವರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಹಿನ್ನಲೆಯಲ್ಲಿ ಮೊದಲ ಮದುವೆ ಮುಚ್ಚಿಟ್ಟು ಎರಡನೇ ಮದುವೆಯಾಗಲು ಯತ್ನಿಸುತ್ತಿದ್ದು, ಕೊನೆ ಗಳಿಗೆಯಲ್ಲಿ ಸಿಕ್ಕ ಫೋಟೋವೊಂದರಿಂದ ಹುಡುಗಿ ಬಚಾವಾಗಿದ್ದಾಳೆ.
ಮಧುಸೂದನ್, ಬೆಂಗಳೂರಿನ ಚಿಕ್ಕಸಂದ್ರದ ಕುವೆಂಪು ಬಡಾವಣೆ ನಿವಾಸಿ. ಖಾಸಗಿ ಕಂಪನಿಯಲ್ಲಿ ಕೆಲಸ, ಕೈತುಂಬಾ ಸಂಬಳವೂ ಇದೆ. ಈತನ ಅಂದವನ್ನು ನೋಡಿದ ಹಾಸನದ ಹುಡುಗಿಯ ಮನೆಯವರು ಮಗಳು ಚೆನ್ನಾಗಿ ಜೀವನ ನಡೆಸಬಹುದೆಂದು ನಂಬಿ ಮಗಳ ಮದುವೆ ಮಾಡಲು ನಿರ್ಧರಿಸಿದರು.
ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ತನ್ನ ಸಂಬಂಧಿಯನ್ನು ಮದುವೆಯಾಗಿದ್ದ ಮಧುಸೂದನ್ ಆಕೆಯಿಂದ ದೂರವಾಗಿ ಹಳೆ ಮದುವೆಯನ್ನು ಮುಚ್ಚಿಟ್ಟು ಹಾಸನದಲ್ಲಿ ಹುಡುಗಿಯೊಬ್ಬಳನ್ನು ನೋಡಿ ಮದುವೆಗೆ ತಯಾರಿ ನಡೆಸಿದ್ದ. ಮೊದಲ ಪತ್ನಿಗೆ ತಿಳಿದಾಗ ಹೇಗೋ ಕೊನೆ ಕ್ಷಣದಲ್ಲಿ ಹುಡುಗಿ ತನ್ನ ಮನೆಯವರನ್ನು ಸಂಪರ್ಕಿಸಿ ಮದುವೆಯ ಫೋಟೋ ಕಳುಹಿಸಿದ್ದಳು. ಈ ವಿಚಾರ ತಿಳಿದ ಕೂಡಲೇ ಮದುವೆ ನಿಲ್ಲಿಸಿದ್ದಾರೆ. ಬಳಿಕ ಮಧುಸೂದನಿಗೆ ಧರ್ಮದೇಟು ನೀಡಿದರು.
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಧುಸೂದನ್ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದು, ಕೌಟುಂಬಿಕ ಕಲಹದಿಂದ ಪತ್ನಿಯಿಂದ ಬೇರ್ಪಟ್ಟಿದ್ದರು, ಅವರ ಪ್ರಕಾರ ಇನ್ನೂ ಮೊದಲ ಪತ್ನಿಗೆ ಕಾನೂನು ಬದ್ಧವಾಗಿ ವಿಚ್ಛೇದನ ನೀಡಿಲ್ಲ, ಮೊದಲ ಮದುವೆ ವಿಚಾರ ಮರೆಮಾಚುತ್ತಲೇ ಮತ್ತೊಂದು ಮದುವೆಗೆ ಪ್ಲಾನ್ ಮಾಡಿದ್ದರು.
ದೂರದ ಹಾಸನದಲ್ಲಿ ಹುಡುಗಿ ಹುಡುಕುತ್ತಿದ್ದ ಈತ ಇಲ್ಲಿಯ ಹುಡುಗಿಯನ್ನು ಕಂಡರೆ ಹಳೇ ಮದುವೆಯ ವಿಚಾರ ತಿಳಿಯಬಹುದು ಎಂಬ ಕಾರಣದಿಂದ. ವಧುವಿನ ಪೋಷಕರ ದೂರಿನಂತೆ ಬಡಾವಣೆ ಪೊಲೀಸರು ಆರೋಪಿ ಮಧುಸೂದನ್ ನನ್ನು ವಿಚಾರಣೆ ನಡೆಸುತ್ತಿದ್ದಾರೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions