ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾದ ಕೊನೆಯಲ್ಲಿ ಅಂದರೆ ಕ್ಲೈಮ್ಯಾಕ್ಸ್ ನಲ್ಲಿ ಬರುವ ‘ವರಾಹ ರೂಪಂ’ ಹಾಡಿಗೆ ಕೋಝಿಕೋಡ್ ಸೆಷನ್ಸ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಈ ಹಿಂದೆ, ಕನ್ನಡ ಬ್ಲಾಕ್‌ಬಸ್ಟರ್ ಕಾಂತಾರ ನಿರ್ಮಾಪಕರು ಕೇರಳ ಮೂಲದ ಸಂಗೀತ ಬ್ಯಾಂಡ್ ಥೈಕ್ಕುಡಂ ಬ್ರಿಡ್ಜ್‌ನಿಂದ ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪವನ್ನು ಎದುರಿಸಿದ್ದರು.
ಕೇರಳ ಮೂಲದ ಮ್ಯೂಸಿಕ್ ಬ್ಯಾಂಡ್ ಥೈಕುಡಂ ಬ್ರಿಡ್ಜ್‌ನಿಂದ ಕೃತಿಚೌರ್ಯದ ದೂರನ್ನು ಸ್ವೀಕರಿಸಿದ ನಂತರ ಕೋಝಿಕೋಡ್ ಸೆಷನ್ಸ್ ನ್ಯಾಯಾಲಯವು ಕಾಂತಾರ ತಯಾರಕರು ಚಿತ್ರಮಂದಿರಗಳು ಮತ್ತು ಇತರ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ “ವರಾಹ ರೂಪಂ” ಹಾಡನ್ನು ಉಪಯೋಗಿಸದಂತೆ ತಡೆಯಾಜ್ಞೆ ನೀಡಿದೆ.
ಜನಪ್ರಿಯ ಇಂಡೀ ಮ್ಯೂಸಿಕ್ ಬ್ಯಾಂಡ್ 2015 ರಲ್ಲಿ ಬಿಡುಗಡೆಯಾದ ತಮ್ಮ “ನವರಸಂ” ಹಾಡನ್ನು ಕೃತಿಚೌರ್ಯ ಮಾಡಿದ ಆರೋಪದ ಮೇಲೆ ಕಾಂತಾರ ತಯಾರಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಘೋಷಿಸಲು ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಬಳಸಿಕೊಂಡರು.
ಅವರು ಕಾಂತಾರ ಹಾಡು “ವರಾಹ ರೂಪಂ” ತಮ್ಮ “ನವರಸಂ” ಹಾಡಿನ ಆಧಾರಿತ ಕೃತಿಚೌರ್ಯ ಎಂದು ಹೇಳಿಕೊಂಡರು. ಥೈಕುಡಮ್ ಬ್ರಿಡ್ಜ್ Instagram ನಲ್ಲಿ ನ್ಯಾಯಾಲಯದ ತಡೆಯಾಜ್ಞೆಯ ಸುದ್ದಿಯನ್ನು ಹಂಚಿಕೊಂಡಿದೆ.
ಪೋಸ್ಟ್‌ನಲ್ಲಿ, “ಕೋಯಿಕ್ಕೋಡ್‌ನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ನಿರ್ಮಾಪಕ, ನಿರ್ದೇಶಕ, ಸಂಗೀತ ಸಂಯೋಜಕರು, ಅಮೆಜಾನ್, ಯೂಟ್ಯೂಬ್, ಸ್ಪಾಟಿಫೈ, ವಿಂಕ್ ಮ್ಯೂಸಿಕ್, ಜಿಯೋಸಾವನ್ ಮತ್ತು ಇತರರಿಗೆ ಅನುಮತಿಯಿಲ್ಲದೆ ಕಾಂತಾರ ಚಿತ್ರದಲ್ಲಿ ವರಾಹ ರೂಪಂ ಹಾಡನ್ನು ನುಡಿಸದಂತೆ ತಡೆಯಾಜ್ಞೆ ನೀಡಿದ್ದಾರೆ ಎಂದು ಹೇಳಿಕೊಂಡಿದೆ.

ಆದರೆ ಇದೆಲ್ಲವನ್ನೂ ಮೀರಿ ರಿಷಬ್ ಶೆಟ್ಟಿ ನಟಿಸಿದ ಕಾಂತಾರ, ದೇಶದಾದ್ಯಂತ ಅಚ್ಚರಿಯ ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿದೆ, ಅದರ ಹಿಂದಿ ಅವತರಣಿಕೆಯು ಕೂಡ ಅಪಾರ ಜನಪ್ರಿಯತೆಯನ್ನು ಪಡೆದಿದೆ.