Friday, September 20, 2024
Homeಯಕ್ಷಗಾನಇಂದು ಕಲ್ಮಡ್ಕದಲ್ಲಿ ‘ವೀರಮಣಿ ಕಾಳಗ’ ಮತ್ತು ‘ಕೃಷ್ಣಾರ್ಜುನ ಕಾಳಗ’

ಇಂದು ಕಲ್ಮಡ್ಕದಲ್ಲಿ ‘ವೀರಮಣಿ ಕಾಳಗ’ ಮತ್ತು ‘ಕೃಷ್ಣಾರ್ಜುನ ಕಾಳಗ’

ಇಂದು (29.10.2022ರ ಶನಿವಾರ) ಕಲ್ಮಡ್ಕ ಶಾಲಾ ವಠಾರದಲ್ಲಿ ಪಂಡಿತ ಕೆರೆಕ್ಕೋಡಿ ಗಣಪತಿ ಭಟ್ ಜನ್ಮಶತಾಬ್ದಿ ಮತ್ತು ಪದ್ಯಾಣ ಗಣಪತಿ ಭಟ್ ಸಂಸ್ಮರಣೆ ಕಾರ್ಯಕ್ರಮ ನಡೆಯಲಿದೆ.

ಅನಂತರ ಸುಪ್ರಸಿದ್ಧ ಕಲಾವಿದರಿಂದ ‘ವೀರಮಣಿ ಕಾಳಗ’ ತಾಳಮದ್ದಳೆ ಮತ್ತು ‘ಕೃಷ್ಣಾರ್ಜುನ ಕಾಳಗ’  ಯಕ್ಷಗಾನ ಬಯಲಾಟ ನಡೆಯಲಿದೆ.

ಅಪರಾಹ್ನ 2 ಘಂಟೆಗೆ ದೀಪ ಪ್ರಜ್ವಲನ ಮತ್ತು ಭಾವಚಿತ್ರ ಅನಾವರಣದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಅನಂತರ 2.15 ಘಂಟೆಗೆ ಸರಿಯಾಗಿ ಯಕ್ಷಗಾನ ತಾಳಮದ್ದಳೆ ‘ವೀರಮಣಿ ಕಾಳಗ’ ಆರಂಭವಾಗಲಿದೆ. ತಾಳಮದ್ದಳೆ ಮುಗಿದ ನಂತರ ಸಂಜೆ 5 ಘಂಟೆಗೆ ಸಂಸ್ಮರಣಾ ಕಾರ್ಯಕ್ರಮ ನೆರವೇರಲಿದೆ.

ಸಂಸ್ಮರಣಾ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷರಾದ ಡಾ| ಟಿ. ಶ್ಯಾಮ ಭಟ್ ವಹಿಸಲಿದ್ದಾರೆ.

ಪಂಡಿತ ಕೆರೆಕ್ಕೋಡಿ ಗಣಪತಿ ಭಟ್ ಸಂಸ್ಮರಣಾ ಭಾಷಣವನ್ನು ಖ್ಯಾತ ತಾಳಮದ್ದಳೆ ಅರ್ಥಧಾರಿಗಳಾದ ಶ್ರೀ ಉಡುವೆಕೋಡಿ ಸುಬ್ಬಪ್ಪಯ್ಯನವರು  ಮಾಡಲಿದ್ದಾರೆ. ಪದ್ಯಾಣ ಸಂಸ್ಮರಣಾ ಭಾಷಣವನ್ನು ಖ್ಯಾತ ತಾಳಮದ್ದಳೆ ಅರ್ಥಧಾರಿಗಳಾದ ಶ್ರೀ ವಾಸುದೇವ ರಂಗಾ ಭಟ್ ನೆರವೇರಿಸಲಿದ್ದಾರೆ.

ಸಂಸ್ಮರಣಾ ಕಾರ್ಯಕ್ರಮದ ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಕೃಷ್ಣಾರ್ಜುನ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ವಿವರಗಳಿಗೆ ಕೆಳಗಿನ ಕಾರ್ಯಕ್ರಮದ ಕರಪತ್ರವನ್ನು ನೋಡಿ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments