ಕಳೆದ ಒಂದು ತಿಂಗಳಿನಲ್ಲಿ 13 ಹಸುಗಳನ್ನು ಕೊಂದು ತಿಂದ ನಂತರ ಕೊನೆಗೂ ಹುಲಿಯನ್ನು ಹಿಡಿದ ಅರಣ್ಯಾಧಿಕಾರಿಗಳು

ಕಳೆದ ಒಂದು ತಿಂಗಳಿನಲ್ಲಿ 13 ಹಸುಗಳನ್ನು ಕೊಂದು ತಿಂದ ನಂತರ ಕೊನೆಗೂ ಅರಣ್ಯಾಧಿಕಾರಿಗಳು ಹುಲಿಯನ್ನು ಸೆರೆ ಹಿಡಿದಿದ್ದಾರೆ.
ಕಳೆದ ಒಂದು ತಿಂಗಳಿನಿಂದ ವಯನಾಡು ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿರುವ ಚೀರಾಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಥಳೀಯ ನಿವಾಸಿಗಳಲ್ಲಿ ಭೀತಿ ಮೂಡಿಸಿದ್ದ ಹುಲಿಯನ್ನು ಇಂದು ಅರಣ್ಯಾಧಿಕಾರಿಗಳು ಬೋನು ಹಾಕಿ ಸೆರೆ ಹಿಡಿದಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಹುಲಿ 13 ಹಸುಗಳನ್ನು ಕೊಂದಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಾರ್ವಜನಿಕರಿಂದ ವ್ಯಾಪಕವಾಗಿ ದೂರುಗಳು ಬರತೊಡಗಿದ್ದುವು.
ಸರಕಾರಕ್ಕೆ ಜನರ ರಕ್ಷಣೆಗಿಂದ ಹುಲಿ, ಸಿಂಹ, ಬೀದಿನಾಯಿಗಳ ರಕ್ಷಣೆಯೇ ಮುಖ್ಯವೆಂದು ತೋರುತ್ತದೆ ಎಂದು ಸಾರ್ವಜನಿಕರು ವ್ಯಂಗ್ಯವಾಗಿ ಮಾತಾಡಿಕೊಳ್ಳುತ್ತಿದ್ದರು.
