ಯಕ್ಷಗಾನ ಸಪ್ತಾಹ (ಭೀಷ್ಮಾವಸಾನ, ಗದಾಯುದ್ಧ, ಕುಶಲವ, ಮಾಗಧವಧೆ, ವೀರಮಣಿ, ಜಾಂಬವತಿ ಕಲ್ಯಾಣ, ಕರ್ಣಪರ್ವ, ಸುಭದ್ರಾ ಕಲ್ಯಾಣ), ತಾಳಮದ್ದಳೆ, ಪ್ರಶಸ್ತಿ ಪ್ರಧಾನ (ಅಭಿನೇತ್ರಿ ಪ್ರಶಸ್ತಿ, ಬೆಳಿಯೂರು ಕೃಷ್ಣಮೂರ್ತಿ ಪ್ರಶಸ್ತಿ, ಕಣ್ಣಿ ಪ್ರಶಸ್ತಿ)

ಅಭಿನೇತ್ರಿ ಆರ್ಟ್ ಟ್ರಸ್ಟ್ ನೀಲ್ಕೋಡು ಅರ್ಪಿಸುವ ಕಲಾಸಂಗಮ ಯಕ್ಷಗಾನ ಸಪ್ತಾಹವು ನಾಳೆ ದಿನಾಂಕ 28.10.2022ರಿಂದ 03.11.2022ರ ವರೆಗೆ ಕುಮಟಾ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೇಟ್ ಹತ್ತಿರವಿರುವ ‘ಗೋಗ್ರೀನ್’ ನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ತಾಳಮದ್ದಳೆ, ಯಕ್ಷಗಾನ ಪ್ರದರ್ಶನ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ನಡೆಯಲಿವೆ.
ಈ ಏಳು ದಿನಗಳಲ್ಲಿ ಭೀಷ್ಮಾವಸಾನ, ಗದಾಯುದ್ಧ, ಕುಶಲವ, ಮಾಗಧವಧೆ, ವೀರಮಣಿ, ಜಾಂಬವತಿ ಕಲ್ಯಾಣ, ಕರ್ಣಪರ್ವ, ಸುಭದ್ರಾ ಕಲ್ಯಾಣ ಎಂಬ ಪ್ರಸಂಗಗಳ ಪ್ರದರ್ಶನ ನಡೆಯಲಿದೆ.
ಜೊತೆಗೆ ಅಭಿನೇತ್ರಿ ಪ್ರಶಸ್ತಿ, ಬೆಳಿಯೂರು ಕೃಷ್ಣಮೂರ್ತಿ ಪ್ರಶಸ್ತಿ, ಕಣ್ಣಿ ಪ್ರಶಸ್ತಿ ಎಂಬ ಮೂರು ಪ್ರಶಸ್ತಿಗಳನ್ನೂ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ವಿವರಗಳಿಗಾಗಿ ಕಾರ್ಯಕ್ರಮದ ಕರಪತ್ರದ ಚಿತ್ರವನ್ನು ನೋಡಬೇಕಾಗಿ ಅಪೇಕ್ಷೆ.
