ಆಲಂಕಾರು ಶ್ರೀ ದುರ್ಗಾಂಬಾ ಕಲಾ ಸಂಗಮದ ಭಾಗವತರಾದ ಡಿ.ಕೆ ಆಚಾರ್ಯರ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಅಭಿನಂದನಾ ಕಾರ್ಯಕ್ರಮವು ಜರಗಿತು.

ಶ್ರೀ ದುರ್ಗಾಂಬಾ ಕಲಾಸಂಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ನೈಮಿಷ ಅಧ್ಯಕ್ಷತೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಡಿ.ಕೆ ಆಚಾರ್ಯ ಮತ್ತು ವಿದ್ಯಾ ಡಿ.ಕೆ ಆಚಾರ್ಯ ದಂಪತಿಯನ್ನು ಗೌರವಿಸಲಾಯಿತು.
ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ದಿವಾಕರ್ ಆಚಾರ್ಯ ಗೇರುಕಟ್ಟೆ ಸತೀಶ್ ಆಚಾರ್ಯ ಮಾಣಿ, ಗುಡ್ಡಪ್ಪ ಗೌಡ ಬಲ್ಯ ಮಾತನಾಡಿ ಕಲಾವಿದನಾಗಿ ಮತ್ತು ಸಂಘಟಕರಾಗಿ ಡಿ.ಕೆ ಆಚಾರ್ಯರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತನ್ನ ಕಲಾ ಜೀವನಕ್ಕೆ ಪ್ರೋತ್ಸಾಹ ನೀಡಿದ ಸರ್ವರನ್ನು ನೆನಪಿಸಿಕೊಂಡ ಡಿ.ಕೆ ಆಚಾರ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾಳಮದ್ದಳೆಯ ಕಲಾವಿದರೆಲ್ಲರನ್ನು ಗೌರವಿಸಿದರು. ರಾಘವೇಂದ್ರ ಭಟ್, ಗಣರಾಜ್ ಕುಂಬಳೆ, ಅಮ್ಮಿಗೌಡ ನಾಲ್ಗುತ್ತು, ವಾಸಪ್ಪ ಗೌಡ ಬಲ್ಯ, ಸಂಜೀವ ಪಾರೆಂಕಿ , ತಾರನಾಥ ಸವಣೂರು, ಆನಂದ ಸವಣೂರು, ಶ್ರೀಪತಿ ಭಟ್ ಉಪ್ಪಿನಂಗಡಿ ಉಪಸ್ಥಿತರಿದ್ದರು.
ಚಂದ್ರಶೇಖರ ಅಲಂಕಾರು ಕಾರ್ಯಕ್ರಮ ನಿರೂಪಿಸಿ ದರು. ದಿವಾಕರ್ ಆಚಾರ್ಯ ನೇರೆಂಕಿ ಮತ್ತು ಮೋಹನ ಶರವೂರು ಸಹಕರಿಸಿದರು.
ಶ್ರೀ ದುರ್ಗಾಂಬಾ ಕಲಾಸಂಗಮ, ಶ್ರೀ ಕಾಳಿಕಾಂಬಾ ಯಕ್ಷಗಾನ ಸೇವಾ ಸಂಘ ಉಪ್ಪಿನಂಗಡಿ, ಸಾಂಸ್ಕೃತಿಕ ಕಲಾವೇದಿಕೆ ಪೆರಿಯಡ್ಕ, ಶ್ರವಣರಂಗ ಸವಣೂರು, ಶಬರೀಶ ಯಕ್ಷಗಾನ ಸಂಘ ನೆಲ್ಯಾಡಿ, ಯಕ್ಷ ನಂದನ ಕೊಯಿಲ, ಶ್ರೀ ವಿನಾಯಕ ಯಕ್ಷಗಾನ ಮಂಡಳಿ ಬಲ್ಯ, ವಿದ್ಯಾರ್ಥಿ ಯಕ್ಷಗಾನ ಸಂಘ ನಟ್ಟಿಬೈಲು, ವಿಶ್ವಕರ್ಮ ಸಂಸ್ಕೃತಿ ಪ್ರಸಾರ ಪ್ರತಿಷ್ಠಾನ ಮೂಡಬಿದ್ರೆ, ಶ್ರೀ ಆಂಜನೇಯ ಯಕ್ಷಗಾನ ಕಲಾಸೇವಾ ಸಂಘ ಬೊಳುವಾರು ಪರವಾಗಿ ಭಾಗವಹಿಸಿದ ಸುಮಾರು 25 ಕ್ಕಿಂತಲೂ ಹೆಚ್ಚು ಕಲಾವಿದರಿಂದ ರತಿ ಕಲ್ಯಾಣ ತಾಳಮದ್ದಳೆ ಜರಗಿತು.


