ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ ಕೊಯ್ಯೂರು ಬೆಳ್ತಂಗಡಿ ತಾಲೂಕು ಸಹಯೋಗದಲ್ಲಿ ಶ್ರೀ ಪಂಚದುರ್ಗ ಯಕ್ಷಗಾನ ಕಲಾ ಸಂಘ ಕೊಯ್ಯೂರು ನೇತೃತ್ವದಲ್ಲಿ ಮತ್ತು ಶ್ರೀ ಪಂಚದುರ್ಗಾ ಭಜನಾ ಮಂಡಳಿ ಸಹಕಾರದಲ್ಲಿ ದಿನಾಂಕ 9/11/2022 ಬುಧವಾರದಿಂದ 13/11/2022 ಭಾನುವಾರದವರೆಗೆ

ಸಂಜೆ 4.30 ರಿಂದ ರಾತ್ರಿ 7.30 ವರೆಗೆ ನಡೆಯುವ ಯಕ್ಷಗಾನ ತಾಳಮದ್ದಳೆ ಪಂಚಾಹ-2022 ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ.ಬಿ. ಹರಿಶ್ಚಂದ್ರ ಬಳ್ಳಾಲ್ ಬಿಡುಗಡೆಗೊಳಿಸಿ ಶುಭಹಾರೈಸಿದರು.
ದೇವಸ್ಥಾನದ ಪ್ರಧಾನ ಅರ್ಚಕರಾದ ಕೆ. ಅಶೋಕ್ ಕುಮಾರ್ ಬಾಂಗಿಣ್ಣಾಯ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯಕ್ಷಗಾನ ಸಂಘದ ಪದಾಧಿಕಾರಿಗಳಾದ ಉಮೇಶ್ ಆಚಾರ್ಯ ಕೋಡಿಯೇಲು, ನಾರಾಯಣ ಭಟ್ ಬಾಸಮೆ ಮತ್ತು ವಿಜಯ್ ಕುಮಾರ್ .ಎಂ ಕೊಯ್ಯೂರು, ಚಿದಾನಂದ ಗುರ್ಬೊಟ್ಟು, ಮತ್ತಿತರು ಉಪಸ್ಥಿತರಿದ್ದರು.
