ಮಧ್ಯಪ್ರದೇಶ: ರೇವಾದಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದು 14 ಮಂದಿ ಮೃತ್ಯುಗೀಡಾಗಿ 40 ಮಂದಿ ಗಾಯಗೊಂಡಿದ್ದಾರೆ. ರೇವಾ ಎಸ್‌ಪಿ ನವನೀತ್ ಭಾಸಿನ್ ಪ್ರಕಾರ, ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಉತ್ತರ ಪ್ರದೇಶದವರು.

ಮಧ್ಯಪ್ರದೇಶದ ರೇವಾದಲ್ಲಿ ಸುಹಾಗಿ ಪಹಾರಿ ಬಳಿ ಟ್ರಾಲಿ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 14 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು 40 ಮಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಗಾಯಗೊಂಡ 40 ಮಂದಿಯಲ್ಲಿ 20 ಮಂದಿಯನ್ನು ಪ್ರಯಾಗ್‌ರಾಜ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ ಹೈದರಾಬಾದ್‌ನಿಂದ ಗೋರಖ್‌ಪುರಕ್ಕೆ ತೆರಳುತ್ತಿತ್ತು. ರೇವಾ ಎಸ್‌ಪಿ ನವನೀತ್ ಭಾಸಿನ್ ಪ್ರಕಾರ, ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಉತ್ತರ ಪ್ರದೇಶದವರು.
ರೇವಾ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಖಾಸಗಿ ಟ್ರಾವೆಲ್ ಬಸ್ (ಬಸ್ ಟ್ರಕ್ ಡಿಕ್ಕಿ) ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ 14 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ 40 ಮಂದಿ ಗಾಯಗೊಂಡಿದ್ದಾರೆ.
ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಶುಕ್ರವಾರ ರಾತ್ರಿ 11.30 ಗಂಟೆಗೆ ಸೊಹಗಿ ಘಾಟ್ ರಸ್ತೆಯಲ್ಲಿ ಈ ಅಪಘಾತ (ರೇವಾ ಬಸ್ ಅಪಘಾತ) ಸಂಭವಿಸಿದೆ. ಈ ಬಸ್ ಹೈದರಾಬಾದ್‌ನ ಸಿಕಂದರಾಬಾದ್‌ನಿಂದ ಯುಪಿಗೆ ಹೋಗುತ್ತಿದೆ ಎಂದು ತಿಳಿದುಬಂದಿದೆ.