ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬಂಧಿತ ವಿದ್ಯಾ ಭಾರತಿ ಕರ್ನಾಟಕ ಮತ್ತು ಶ್ರೀರಾಮ ಪದವಿ ಪೂರ್ವ ಕಾಲೇಜು ಕಲ್ಲಡ್ಕ ಇವರ ಆಶ್ರಯದಲ್ಲಿ ರಾಜ್ಯ ಮಟ್ಟದ ಮತ್ತು ಕ್ಷೇತ್ರಿಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ದಿನಾಂಕ 19-10-2022ರಂದು Officer’s Club ಪುತ್ತೂರು ಇಲ್ಲಿ ನಡೆಯಿತು.
ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಬಾಲವರ್ಗದ ಬಾಲಕರ ವಿಭಾಗದಲ್ಲಿ 6ನೇ ತರಗತಿಯ ಇಶಾನ್.ಕೆ (ಶ್ರೀ ನಾರಾಯಣ ಮೂರ್ತಿ ಮತ್ತು ಪ್ರೇಮಲತ ಇವರ ಪುತ್ರ), ಹಿತನ್ ಕುಮಾರ್( ಶ್ರೀ ಉದಯ ಮತ್ತು ಲಲಿತ ಇವರ ಪುತ್ರ), 7ನೇ ತರಗತಿಯ ಕಾರ್ತಿಕ್ ಕುಮಾರ್(ಶ್ರೀ ಪ್ರಶಾಂತ್ ಕುಮಾರ್ ಮತ್ತು ಅಂಜಲಿ ಇವರ ಪುತ್ರ) ಮತ್ತು ಮಹಿನ್.ಪಿ.ಆರ್ (ಶ್ರೀ ರಾಕೇಶ್ ಕುಮಾರ್ ಪರ್ಲಡ್ಕ ಮತ್ತು ಜ್ಯೋತಿ ಇವರ ಪುತ್ರ) ಇವರು ಭಾಗವಹಿಸಿ, ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ 8ನೇ ತರಗತಿಯ ಸಮನ್ವಿತ.ಕೆ (ಶ್ರೀ ಕಿಶೋರ್ ಕುಮಾರ್ ಮತ್ತು ರೂಪಾಶ್ರೀ.ಕೆ ಇವರ ಪುತ್ರಿ), 7ನೇ ತರಗತಿಯ ಕೀರ್ತನಾ (ಶ್ರೀ ಪ್ರತಾಪ್ ಸಿಂಹ ವರ್ಮ ಮತ್ತು ವೀಣಾ ಕುಮಾರಿ ಇವರ ಪುತ್ರಿ) ಇವರು ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ 10ನೇ ತರಗತಿಯ ಹರ್ಷಿತ( ಶ್ರೀ ಸಂತೋಷ್ ನಾಯ್ಕ ಮತ್ತು ಕವಿತಾ.ಕೆ ಇವರ ಪುತ್ರಿ) , ಶ್ರೇಯಾ.ರಾವ್ (ಶ್ರೀ ಕೆ. ಅನಂತಕೃಷ್ಣ ರಾವ್ ಮತ್ತು ವೀಣಾ ರಾವ್ ಇವರ ಪುತ್ರಿ), 9ನೇ ತರಗತಿಯ ಸಾನ್ವಿ (ಶ್ರೀ ಜೆ.ನೆಲ್ಸನ್ ಮತ್ತು ವಾಣಿ.ಯು.ಹೆಚ್ ಪುತ್ರಿ), ರುಚಿತಾ.ಆರ್ (ಶ್ರೀ ರತ್ನಾಕರ್ ಪ್ರಭು ಮತ್ತು ಸವಿತಾ.ಕೆ ಇವರ ಪುತ್ರಿ) ಇವರು ಭಾಗವಹಿಸಿ, ದ್ವಿತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.