ದಿನಾಂಕ 23.10.2022ರ ಆದಿತ್ಯವಾರ ಪುತ್ತೂರಿನಲ್ಲಿ ಕೀರ್ತಿಶೇಷ ಖ್ಯಾತ ಯಕ್ಷಗಾನ ಭಾಗವತ ಗಾನಗಂಧರ್ವ ಪದ್ಯಾಣ ಗಣಪತಿ ಭಟ್ಟರ ಸಂಸ್ಮರಣೆ ನಡೆಯಲಿದೆ. ಈ ಕಾರ್ಯಕ್ರಮದ ಅಂಗವಾಗಿ ಪದ್ಯಾಣ ಗಣಪತಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವೂ ಜರಗಲಿದೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಈ ಬಾರಿಯ ಪದ್ಯಾಣ ಪ್ರಶಸ್ತಿಯನ್ನು ಖ್ಯಾತ ಭಾಗವತರಾದ ಶ್ರೀ ದಿನೇಶ ಅಮ್ಮಣ್ಣಾಯ ಮತ್ತು ಶ್ರೀ ಪುತ್ತಿಗೆ ರಘುರಾಮ ಹೊಳ್ಳರಿಗೆ ನೀಡಲಾಗುವುದು.
ಬೆಳಿಗ್ಗೆ 9.30 ಘಂಟೆಗೆ ಆರಂಭವಾಗಲಿರುವ ಈ ಕಾರ್ಯಕ್ರಮವು ರಾತ್ರಿಯ ವರೆಗೆ ನಡೆಯಲಿದೆ.
ಈ ದಿನದಲ್ಲಿ, ಪದ್ಯಾಣ ಸಂಸ್ಮರಣೆ ಮತ್ತು ಪದ್ಯಾಣ ಪ್ರಶಸ್ತಿ ಪ್ರದಾನ, ಮಾತು ಮಂಥನ, ಗಾನವೈಭವ, ಯಕ್ಷ ಸನ್ನಿವೇಶ, ಯಕ್ಷಗಾನ ಬಯಲಾಟ ‘ಕಂದರ್ಪ ವಿವಾಹ’ ಮೊದಲಾದ ಕಾರ್ಯಕ್ರಮಗಳು ಒಳಗೊಂಡಿವೆ.
ದಿನದ ಎಲ್ಲಾ ಕಾರ್ಯಕ್ರಮಗಳ ಸವಿವರಕ್ಕಾಗಿ ಕರಪತ್ರವನ್ನು (ಚಿತ್ರ) ನೋಡಿ.
