Sunday, January 19, 2025
Homeಯಕ್ಷಗಾನಇಂದು ಮೂಲ್ಕಿ ಯಕ್ಷಗಾನ ಸಪ್ತಾಹದಲ್ಲಿ 'ಅಂಗದ ಸಂಧಾನ' - ಪೆರ್ಮುದೆ:ಅಂಗದ ಮತ್ತು ಗಣೇಶ್ ಕನ್ನಡಿಕಟ್ಟೆ:ಪ್ರಹಸ್ತ -...

ಇಂದು ಮೂಲ್ಕಿ ಯಕ್ಷಗಾನ ಸಪ್ತಾಹದಲ್ಲಿ ‘ಅಂಗದ ಸಂಧಾನ’ – ಪೆರ್ಮುದೆ:ಅಂಗದ ಮತ್ತು ಗಣೇಶ್ ಕನ್ನಡಿಕಟ್ಟೆ:ಪ್ರಹಸ್ತ – ಕೂತೂಹಲಕಾರಿ ಮಾತಿನ ಚಕಮಕಿಯ ನಿರೀಕ್ಷೆ 

ಇಂದು ಮೂಲ್ಕಿ ಯಕ್ಷಗಾನ ಸಪ್ತಾಹದ ಪ್ರದರ್ಶನಗಳಲ್ಲಿ  ‘ಅಂಗದ ಸಂಧಾನ’ ಪ್ರಸಂಗವೂ ಒಂದು. ಈ ಪ್ರಸಂಗದಲ್ಲಿ  ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರ ಅಂಗದ ಮತ್ತು ಗಣೇಶ್ ಕನ್ನಡಿಕಟ್ಟೆಯವರ ಪ್ರಹಸ್ತ ಪಾತ್ರಗಳು ಯಕ್ಷಾಭಿಮಾನಿಗಳಲ್ಲಿ ಕೂತೂಹಲಕಾರಿ ಮಾತಿನ ಚಕಮಕಿಯ ನಿರೀಕ್ಷೆಯನ್ನು ಮೂಡಿಸಿವೆ. 

ಯಕ್ಷಗಾನ ಪ್ರಿಯರಿಗೆ ಒಂದು ಅಮೋಘ  ಏಳು ದಿನಗಳ ಯಕ್ಷಗಾನ ರಸದೌತಣ ಸಿಗಲಿದೆ.  ಸಂಪೂರ್ಣ ರಾಮಾಯಣ ಎಂಬ ಪ್ರಸಂಗ ಏಳು ದಿನಗಳಲ್ಲಿ 17.10. 2022ರಿಂದ  23.10. 2022ರ ವರೆಗೆ ತೆಂಕು-ಬಡಗು ತಿಟ್ಟುಗಳಲ್ಲಿ ಪ್ರದರ್ಶನಗೊಳ್ಳಲಿದೆ.

ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿರುವ ದ್ವಾದಶ ಕೋಟಿ ಶ್ರೀ ರಾಮ ನಾಮ ತಾರಕ ಮಂತ್ರ ಜಪ ಯಜ್ಞದ ಪೂರ್ವಭಾವಿಯಾಗಿ  17.10. 2022ರಿಂದ  23.10. 2022ರ ವರೆಗೆ ಯಕ್ಷಗಾನ ರಾಮಾಯಣ ಸಪ್ತಾಹವನ್ನು ಆಯೋಜಿಸಲಾಗಿದೆ.

ಈ ಏಳು ದಿನಗಳಲ್ಲಿ ರಾಮಾಯಣದ ಪ್ರಾರಂಭದಿಂದ ಕೊನೆಯತನಕ ಏಳು ದಿನಗಳ ಯಕ್ಷಗಾನ ಪ್ರದರ್ಶನ ನಡೆಯಲಿದೆ. ತೆಂಕುತಿಟ್ಟು ಮತ್ತು ಬಡಗುತಿಟ್ಟು ಪ್ರದರ್ಶನಗಳನ್ನು ಆಯೋಜಿಸಲಾಗಿದೆ.

ವಿವರಗಳಿಗೆ ಕರಪತ್ರದ ಚಿತ್ರವನ್ನು ನೋಡಿ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments