ಉಡುಪಿ : ಮೂರು ದಶಕಗಳ ಕಾಲ ನಿಟ್ಟೂರು ಪ್ರೌಢಶಾಲೆಯ ಅಧ್ಯಾಪಕರಾಗಿ ನಿವೃತ್ತರಾದ, ವೃತ್ತಿಯಲ್ಲಿ ಇರುವಾಗಲೂ, ನಿವೃತ್ತರಾದ ಮೇಲೂ ಯಕ್ಷಗಾನ ಕಲಾರಂಗದ ನಿಷ್ಠಾವಂತ ಕಾರ್ಯಕರ್ತರಾಗಿ ತೊಡಗಿಸಿಕೊಂಡು ಸಂಸ್ಥೆಯ ಉತ್ಕರ್ಷದಲ್ಲಿ ವಿಶೇಷ ಕೊಡುಗೆ ನೀಡಿದ
ಶ್ರೀ ಎಚ್. ಎನ್. ಶೃಂಗೇಶ್ವರ ಇವರು ಯಕ್ಷಗಾನ ಕಲಾರ0ಗದ ಹಿರಿಯ ಕಾರ್ಯಕರ್ತರಿಗಾಗಿ, ವಿಜಯಕುಮಾರ್ ಮುದ್ರಾಡಿಯವರು ಸ್ಥಾಪಿಸಿದ ಯಕ್ಷಚೇತನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ನವಂಬರ್ 13, 2022 ಭಾನುವಾರ ಮಂಗಳೂರಿನ ಟೌನ್‌ಹಾಲ್‌ನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂಬುದಾಗಿ ಸಂಸ್ಥೆಯ ಅಧ್ಯಕ್ಷ ಎಂ.ಗ0ಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.