Sunday, January 19, 2025
Homeಸುದ್ದಿಬೀರಮಲೆ ಗುಡ್ಡದಲ್ಲಿ ಮದ್ಯದ ಬಾಟಲಿಗಳಾಟ? ಸ್ವೇಚ್ಛಾಚಾರಕ್ಕೆ ಬೇಕು ಸ್ವಲ್ಪ ಕಡಿವಾಣ 

ಬೀರಮಲೆ ಗುಡ್ಡದಲ್ಲಿ ಮದ್ಯದ ಬಾಟಲಿಗಳಾಟ? ಸ್ವೇಚ್ಛಾಚಾರಕ್ಕೆ ಬೇಕು ಸ್ವಲ್ಪ ಕಡಿವಾಣ 

ಪುತ್ತೂರಿನ ಬೀರಮಲೆ ಗುಡ್ಡ ಪ್ರವಾಸಿ ತಾಣವಾಗಿ ಪ್ರಖ್ಯಾತಿಯನ್ನು ಪಡೆದಿದೆ. ಬೇರೆ ಊರುಗಳಿಂದಲೂ ಇಲ್ಲಿಗೆ ಬರುವ ಜನರಿದ್ದಾರೆ. ಬೀರಮಲೆ ಗುಡ್ಡದಲ್ಲಿ ಬಾಟಲಿಗಳು ವಿಪರೀತ ಸುದ್ದಿಮಾಡುತ್ತಿವೆ ಎಂಬ ವದಂತಿಗಳು ಮೊದಲಿಂದಲೂ ಹರಿದಾಡುತ್ತಿತ್ತು. ವಿಷಯ ಹೌದು ಎಂದು ಕೆಲವು ಸ್ನೇಹಿತರು ಹೇಳಿದ್ದರು. ನೋಡುವ ಅಂತ ಒಂದು ಕುತೂಹಲ ಇತ್ತು. ಅಲ್ಲಿ ಮದ್ಯಪಾನ ನಿಷೇಧ ಇದೆಯೋ ಇಲ್ಲವೋ ಎಂದು ನನಗೆ ಗೊತ್ತಿಲ್ಲ. ಆದರೂ ವಿಷಯ ಸಂಗ್ರಹಣೆ ತಪ್ಪಲ್ಲವಲ್ಲ. 

ಕುಡಿಯಬಾರದು ಎಂದು ಹೇಳುತ್ತಿಲ್ಲ! ಎಷ್ಟಾದರೂ ಅದು ಗುಡ್ಡ ಅಲ್ವ? ಕುಡಿದರೆ ಯಾರಿಗೇನು ನಷ್ಟ? ಆದರೆ ಒಂದು ಪಾರ್ಕ್ ಅಂತ ಆದಮೇಲೆ, ಅಲ್ಲಿಗೆ ಪ್ರವಾಸಿಗರು ಬರುವ ಹಾಗಾದ ಮೇಲೆ, ಅಲ್ಲಿ ಸ್ವಲ್ಪವಾದರೂ ನಾಗರಿಕತೆಯ ಲಕ್ಷಣ ಇರಬೇಕಾಗುತ್ತದೆ.

ಮರ್ಯಾದಸ್ಥರು, ಮಕ್ಕಳು, ಹೆಂಗಸರು ಬರುವ ಜಾಗದಲ್ಲಿ ಹೀಗೆಲ್ಲಾ ಬಾಟಲಿಗಳು ಬಿದ್ದಿರುವುದು ಒಂದು ಪಾರ್ಕ್, ಉದ್ಯಾನವನದ ಪರಿಸರಕ್ಕೆ ಶೋಭೆ ತರುವ ವಿಷಯವಲ್ಲ. ಇದ್ಯಾವ ಬಾಟಲಿ ಎಂದು ಮಕ್ಕಳು ಕೇಳಿದರೆ ಉತ್ತರಿಸಲು ತಡವರಿಸಬೇಕಾಗುತ್ತದೆ. ನನಗೂ ಹಾಗೆಯೇ ಆಯಿತು.

ನಾನೂ ಹೋಗಿದ್ದೆ ಕುಟುಂಬ ಸಮೇತ. ಒಳಗೆಲ್ಲಾ ಹೋಗಿಬಂದ ಮೇಲೆ ಹೊರಗಡೆಯ ರಂಗಮಂದಿರದ ಬಯಲಿನಿಂದ ಪುತ್ತೂರು ನಗರವನ್ನು ಕಣ್ತುಂಬಿಕೊಂಡ ಮೇಲೆ ಆ ಬಯಲಿನ ಸುತ್ತು ಹಾಕಿದೆ. ಆಗ ಕಣ್ಣಿಗೆ ಬಿದ್ದುವು. ಕೆಲವು ಬಾಟಲಿಗಳು. ನಾನು ನೋಡಿಯೂ ನೋಡದವನಂತೆ ನಟಿಸಿದರೂ ಮಗ ಕೇಳಿದ. ಇದ್ಯಾವ ಬಾಟಲಿ ಎಂದು ಕೇಳಿದ್ದಕ್ಕೆ ಏನೋ ಒಂದು ಹೇಳಿ ವಿಷಯ ಮರೆಸಿದೆ. ಆಮೇಲೆ ಅವನನ್ನು ತಾಯಿಯ ಜೊತೆ ಕಳುಹಿಸಿ ನಾನು ಒಂದೆರಡು ಫೋಟೋ ಹೊಡೆದೆ. 

ಬಾಟಲಿಗಳು ಬಿದ್ದಿರುವುದು ಹೌದು. ಅಲ್ಲಿ ಅವುಗಳ ಉಪಯೋಗ ಕಾನೂನಾತ್ಮಕವಾಗಿ ಅಪರಾಧವೋ ಅಲ್ಲವೋ ಎಂದು ನನಗೆ ಗೊತ್ತಿಲ್ಲ. ಆದರೆ ಅಂತಹಾ ಸ್ಥಳಗಳಲ್ಲಿ ಅದನ್ನು ನಿಷೇಧಿಸಬೇಕು ಎಂಬುದು ಸರಿಯಾದ ವಿಚಾರ.

ಬೀರಮಲೆ ಗುಡ್ಡ ಕೆಲವೊಮ್ಮೆ ವಿಪರೀತವಾಗಿ ಸುದ್ದಿಯಲ್ಲಿರುತ್ತದೆ. ಕೆಲವೊಮ್ಮೆ ಭಿನ್ನಕೋಮಿನ ಜೋಡಿಗಳ ಕಾರಣದಿಂದ, ಕೆಲವೊಮ್ಮೆ ಪ್ರೀತಿ, ಪ್ರಣಯಗಳ ಕಾರಣಕ್ಕಾಗಿ. ಮದ್ಯಸೇವೆನೆಯೂ ಇನ್ನೊಂದು ಕಾರಣ. ಹೀಗೆ ಸಣ್ಣ ಸಣ್ಣ ಮಕ್ಕಳು ವಿಹರಿಸುವ, ಆಟವಾಡುವ ಸ್ಥಳಗಳ ಸುತ್ತಮುತ್ತಲೂ ಸ್ವಲ್ಪ ಜಾಗರೂಕತೆಯಿಂದ ವ್ಯವಹರಿಸಿದರೆ ಉತ್ತಮ. ಇಲ್ಲವಾದರೆ ನಾಗರಿಕ ಸಮಾಜ ತಲೆತಗ್ಗಿಸಬೇಕಾದೀತು. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments