ಮಹಾಕವಿ ಶ್ರೀ ರಾಘವಾಂಕ ವಿರಚಿತ ಸಿದ್ದರಾಮ ಚಾರಿತ್ರ’ ಗ್ರಂಥ ಲೋಕಾರ್ಪಣೆ ಇಂದು ನೆರವೇರಲಿದೆ. ಇಂದು ದಿನಾಂಕ 16.10.2022ರಂದು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಬಳ್ಳಾರಿಯ ಶ್ರೀ ಸದ್ಗುರು ಮಹಾದೇವ ತಾತನವರ ಮಠದಲ್ಲಿ ನಡೆಯುತ್ತಿರುವ, ‘ಮಹಾಕವಿ ಶ್ರೀ ರಾಘವಾಂಕ ವಿರಚಿತ ಸಿದ್ದರಾಮ ಚಾರಿತ್ರ’ ಗ್ರಂಥ ಲೋಕಾರ್ಪಣೆ, ಅಯ್ಯಾಚಾರ- ಶಿವದೀಕ್ಷೆ,
ಸಿದ್ದರಾಮ ನಿಷ್ಕಾಮ ಕರ್ಮ ಸೇವಾ ಪುರಸ್ಕಾರ ಮತ್ತು ಭಾವೈಕ್ಯ ಧರ್ಮಸಭೆಗೆ ಆಗಮಿಸುತ್ತಿರುವ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ ಅವರಿಗೆ ಬಳ್ಳಾರಿ ನಗರ (94) ಕ್ಷೇತ್ರದ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಮತ್ತು ಯಡಿಯೂರಪ್ಪ ಅಭಿಮಾನಿಗಳು ಹೃತ್ಪೂರ್ವಕ ಸ್ವಾಗತವನ್ನು ಕೋರಿದ್ದಾರೆ.