ಎರಡು ತಿಂಗಳ ಹಿಂದೆ ವಿವಾಹವಾಗಿದ್ದ ಮಹಿಳೆ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಕೊಟ್ಟಾಯಂ: ಎರಡು ತಿಂಗಳ ಹಿಂದೆ ವಿವಾಹವಾಗಿದ್ದ 24 ವರ್ಷದ ಯುವತಿಯೊಬ್ಬಳು ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯನ್ನು ತೊಡುಪುಳ ಕುನ್ನಂ ಕೊಲ್ಲಪಳ್ಳಿಯ ಮ್ಯಾಥ್ಯೂಸ್ ಕೆ ಸಾಬು ಅವರ ಪತ್ನಿ ಅನುಷಾ ಜಾರ್ಜ್ ಎಂದು ಗುರುತಿಸಲಾಗಿದೆ.
ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಘಟನೆ ವೇಳೆ ಮನೆಯಲ್ಲಿ ಆಕೆಯ ಅತ್ತೆ ಮತ್ತು ಸಹೋದರಿ ಮಾತ್ರ ಇದ್ದರು.
ಕೂಡಲೇ ಆಕೆಯನ್ನು ಮುತ್ತಲಕೋಡಂನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಲಿಲ್ಲ.
ಅನುಷಾ ತೊಂಡಿಕ್ಕುಳ ಕೂವೆಕುನ್ನು ನೆಡುಮಲದ ಡಾ ಜಾರ್ಜ್ ಮತ್ತು ಐಬಿ ದಂಪತಿಯ ಪುತ್ರಿ. ಅನುಷಾ ಮತ್ತು ಮ್ಯಾಥ್ಯೂಸ್ ಎಂಟು ತಿಂಗಳ ಡೇಟಿಂಗ್ ನಂತರ ಆಗಸ್ಟ್ 18, 2022 ರಂದು ವಿವಾಹವಾದರು.
ಆಕೆ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದಳು ಎಂದು ಆಕೆಯ ಪತಿಯ ಮನೆಯವರು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡಿವೈಎಸ್ಪಿ ಮಧು ಆರ್ ಬಾಬು ತನಿಖೆಯ ಹೊಣೆ ಹೊತ್ತಿದ್ದಾರೆ.