ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರಿಯ ವಲಯ ಮತ್ತು ಶ್ರೀವಿದ್ಯಾರಣ್ಯ ಆವಾಸ ವಿದ್ಯಾಲಯ, ಹೈದರಾಬಾದ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಒಳಗೊಂಡ ದಕ್ಷಿಣ ಮಧ್ಯ ಕ್ಷೇತ್ರಿಯ ಮಟ್ಟದ ಗಣಿತ-ವಿಜ್ಞಾನ ಮೇಳವು ಹೈದರಾಬಾದಿನ ಶ್ರೀ ವಿದ್ಯಾರಣ್ಯ ಆವಾಸ ವಿದ್ಯಾಲಯದಲ್ಲಿ ಅಕ್ಟೋಬರ್11ರಿಂದ ಅಕ್ಟೋಬರ್13ರ ವರೆಗೆ ನಡೆಯಿತು.
ಈ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ ವಿದ್ಯಾರ್ಥಿಗಳಾದ ಶಮನ್. ಎನ್ ಹಾಗೂ ಪ್ರೀತಿ.ಪಿ.ಪ್ರಭು ಭಾಗವಹಿಸಿರುತ್ತಾರೆ.
14ರ ವಯೋಮಾನದ ಬಾಲವರ್ಗದ ವಿಭಾಗದ ಗಣಿತ ಮಾದರಿ ತಯಾರಿಯಲ್ಲಿ 7ನೇ ತರಗತಿಯ ಶಮನ್. ಎನ್ (ಶ್ರೀ ನಿತ್ಯಾನಂದ.ಕೆ ಮತ್ತು ಶ್ರೀಮತಿ ಸಂಧ್ಯಾ.ಕೆ ಇವರ ಪುತ್ರ) ಪ್ರಥಮ ಸ್ಥಾನ ಪಡೆದು ಉತ್ತರ ಪ್ರದೇಶದ ಪ್ರಯಾಗ್‍ರಾಜ್ ನಲ್ಲಿ ನವೆಂಬರ್ 3ರಂದು ನಡೆಯಲಿರುವ ರಾಷ್ಟ್ರೀಯ ಮಟ್ಟದ ಗಣಿತ ವಿಜ್ಞಾನ ಮೇಳಕ್ಕೆ ಆಯ್ಕೆಯಾಗಿರುತ್ತಾರೆ.
7ನೇ ತರಗತಿಯ ಪ್ರೀತಿ.ಪಿ.ಪ್ರಭು (ಶ್ರೀ ಪುಂಡಲೀಕ ಪ್ರಭು ಮತ್ತು ನಾಗಮಣಿ ಪ್ರಭು ಇವರ ಪುತ್ರಿ) ಗಣಿತ ಪ್ರಯೋಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ವಿದ್ಯಾರ್ಥಿಗಳು ತಮ್ಮ ಮಾದರಿಗಳನ್ನು ಶಾಲಾ ಗಣಿತ ಮತ್ತು ವಿಜ್ಞಾನ ಶಿಕ್ಷಕಿಯರ ಮಾರ್ಗದರ್ಶನದಲ್ಲಿ ತಯಾರಿಸಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.