ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ಕಾರನ್ನು ಅಡ್ಡಗಟ್ಟಿ ತಲವಾರು ತೋರಿಸಿ ಜೀವಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಬಗ್ಗೆ ಶಾಸಕರ ಚಾಲಕ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಿನ್ನೆ ರಾತ್ರಿ ಮಂಗಳೂರಿಂದ ಫರಂಗಿಪೇಟೆವರೆಗೆ ಶಾಸಕರ ಕಾರನ್ನು ಹಿಂಬಾಲಿಸಿಕೊಂಡು ಬಂದು ಜೀವ ಬೆದರಿಕೆ ಹಾಕಿದ್ದಾರೆ. ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದ ಕೆಲವರಿಂದ ಈ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ.
ವೈಟ್ ಸ್ಕಾರ್ಪಿಯೋ ಕಾರೊಂದು ನಿನ್ನೆ ರಾತ್ರಿ ಮಂಗಳೂರಿನಿಂದ ಫರಂಗಿಪೇಟೆವರೆಗೆ ಶಾಸಕರ ಕಾರನ್ನು ಹಿಂಬಾಲಿಸಿಕೊಂಡು ಬಂದಿದೆ. ನಿನ್ನೆ ರಾತ್ರಿ ಬೆಂಗಳೂರಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಶಾಸಕ ಹರೀಶ್ ಪೂಂಜಾರವರು ಆಮೇಲೆ ತನ್ನ ಕಾರನ್ನು ಬಿಟ್ಟು ತನ್ನ ಸಂಬಂಧಿಕರ ಕಾರಿನಲ್ಲಿ ಬೆಳ್ತಂಗಡಿಗೆ ಹಿಂತಿರುಗುತ್ತಿದ್ದರು.
ಮಂಗಳೂರಿನಿಂದ ಫರಂಗಿಪೇಟೆ ವರೆಗೆ ಅವರ ಕಾರನ್ನು ಸ್ಕಾರ್ಫಿಯೋ ಕಾರು ಹಿಂಬಾಲಿಸುತ್ತಿತ್ತು. ಫರಂಗಿಪೇಟೆಯಲ್ಲಿ ಶಾಸಕರ ಕಾರನ್ನು ಅಡ್ಡಕಟ್ಟಿದ ಸ್ಕಾರ್ಫಿಯೋ ಕಾರಿನಲ್ಲಿದ್ದವರು ಶಾಸಕರಿಗೆ ಮತ್ತು ಶಾಸಕರಿದ್ದ ಸಂಬಂಧಿಕರ ಕಾರಿನಲ್ಲಿದ್ದವರಿಗೆ ಮತ್ತು ಹಿಂಬಾಲಿಸಿ ಬರುತ್ತಿದ್ದ ಶಾಸಕರ ಕಾರಿನ ಚಾಲಕ ನವೀನ್ ಎಂಬವರಿಗೆ ತಲವಾರು ತೋರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಹಾಕಿದ್ದಾರೆ.
ಕೂಡಲೇ ಶಾಸಕರಿದ್ದ ಕಾರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಸ್ಟೇಷನ್ ನತ್ತ ತಿರುಗಿಸಿಲಾಯಿತು. ಅದನ್ನು ಕಂಡ ಸ್ಕಾರ್ಫಿಯೋ ಕಾರು ಬಿ. ಸಿ. ರೋಡಿನತ್ತ ಪರಾರಿಯಾಯಿತು.
ಈ ಬಗ್ಗೆ ಶಾಸಕರ ಚಾಲಕ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, (ದೂರಿನ ಪ್ರತಿಯ ಚಿತ್ರ ನೋಡಿ)
