Saturday, January 18, 2025
Homeಸುದ್ದಿವಿಟ್ಲದಲ್ಲಿ ಅಂಗಡಿಯ ಶಟರ್ ಮೇಲೆ ಜಿಹಾದ್ ಬರಹ - ವಿಟ್ಲ ಪೊಲೀಸರಿಂದ ಸಿಸಿಟಿವಿ ಪರಿಶೀಲನೆ 

ವಿಟ್ಲದಲ್ಲಿ ಅಂಗಡಿಯ ಶಟರ್ ಮೇಲೆ ಜಿಹಾದ್ ಬರಹ – ವಿಟ್ಲ ಪೊಲೀಸರಿಂದ ಸಿಸಿಟಿವಿ ಪರಿಶೀಲನೆ 

ನಿನ್ನೆ ರಾತ್ರಿ ವಿಟ್ಲದ ಮಧ್ಯಪೇಟೆಯಲ್ಲಿರುವ ಅಂಗಡಿಯಲ್ಲಿ ಜಿಹಾದಿಗಳ ಬರಹ ಗೋಚರಿಸಿತು. ವಿಟ್ಲ ಪೇಟೆಯಲ್ಲಿರುವ ದೀಪಕ್ ವಾಚ್ ವರ್ಕ್ಸ್ ಎಂಬ ಅಂಗಡಿಯ ಶಟರ್ ಮೇಲೆ ಈ ಬರಹ ಕಾಣಿಸಿಕೊಂಡಿದೆ.

ದೀಪಕ್ ವಾಚ್ ವರ್ಕ್ಸ್ ಎಂಬ ಅಂಗಡಿಯ ಮಾಲಕ ಅಬ್ದುಲ್ಲಾ ಎಂಬವರು. ಇಂದು ಬೆಳಿಗ್ಗೆ ಅಬ್ದುಲ್ಲಾ ಅವರು ತನ್ನ ಅಂಗಡಿಯಾದ ದೀಪಕ್ ವಾಚ್ ವರ್ಕ್ಸ್ ಗೆ ಆಗಮಿಸಿದಾಗ ಈ ಬರಹ ಅವರಿಗೆ ಕಂಡುಬಂದಿದೆ.

ಈ ಅಂಗಡಿಯ ಶಟರ್ ಮೇಲೆ ಇಂಗ್ಲೀಷ್ ಭಾಷೆಯಲ್ಲಿ NAME Jihad ಎಂದು ಬರೆಯಲಾಗಿತ್ತು.  ಕೂಡಲೇ ಅವರು ವಿಟ್ಲ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ.

ಪೊಲೀಸರು ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿರುವಾಗ ಒಬ್ಬ ವ್ಯಕ್ತಿ ಬರುತ್ತಿರುವುದು ಕಾಣಿಸಿದೆ. ಆದರೆ ಆ ವ್ಯಕ್ತಿ ಯಾರು ಎಂದು ಸ್ಪಷ್ಟವಾಗಿಲ್ಲ. ಪೊಲೀಸರ ತನಿಖೆ ಪ್ರಗತಿಯಲ್ಲಿದೆ. 

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments